- Advertisement -
- Advertisement -
ಹೊಸದಿಲ್ಲಿ, ಎ.16: ಕೊರೋನ್ ವೈರಸ್‌ಗೆ ಕಡಿವಾಣ ಹಾಕಲು ದೇಶಾದ್ಯಂತ ಲಾಕಡೌನ್ ಘೋಷಿಸಿರುವುದರಿಂದ ಆರೋಗ್ಯ ಮತ್ತು ಮೋಟಾರು ವಿಮಾ ಪಾಲಿಸಿ ಕಂತು ನವೀಕರಿಸಲು ಮೇ 15ರ ತನಕ ಅವಕಾಶವಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಗುರುವಾರ ಬೆಳಿಗ್ಗೆ ಟ್ವೀಟ್ ಮೂಲಕ ಈ ವಿಚಾರ ತಿಳಿಸಿದರು. ಮಾರ್ಚ್ 25ರಿಂದ ಮೇ3ರ ನಡುವೆ ಕಂತು ಪಾವತಿಸಬೇಕಿದ್ದ ಪಾಲಿಸಿಗೆ ಈ ವಿನಾಯಿತಿ ಅನ್ವಯವಾಗುತ್ತದೆ. ಕಂತು ವಿನಾಯಿತಿ ಅವಧಿಯಲ್ಲೂ ವಿಮಾ ಕಂಪೆನಿಗಳು ಕ್ಲೇಮುಗಳ ಪ್ರಕ್ರಿಯೆಯನ್ನು ಎಂದಿನಂತೆ ನಡೆಸಬೇಕು ಎಂದು ಸೂಚಿಸಿದ್ದಾರೆ. ಈ ಸಂಬಂಧ ಸರಕಾರ ಅಧಿಸೂಚನೆ ಹೊರಡಿಸಿದೆ.
ಗೃಹ ಸಾಲ ಸೇರಿದಂತೆ ವಿವಿಧ ಸಾಲಗಳ ಕಂತು ಪಾವತಿಗೆ ಈ ಹಿಂದೆಯೇ ಕೇಂದ್ರ ಹಣಕಾಸು ಸಚಿವಾಲಯ ಮೂರು ತಿಂಗಳ ವಿನಾಯಿತಿ ಘೋಷಿಸಿತ್ತು.
- Advertisement -