- Advertisement -
- Advertisement -
ಬೆಳ್ತಂಗಡಿ: ಡಿಸೆಂಬರ್ 27-29 ರವರೆಗೆ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡುವ ಹವ್ಯಕ ವೇದರತ್ನ ವೇದಮೂರ್ತಿ ವೆಂಕಟೇಶ ಶಾಸ್ತ್ರಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಹವ್ಯಕ ಸಮ್ಮೇಳನದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರುವಿನ ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಹಾಗೂ ಶ್ರೀಮತಿ ಶಾರದಾ ದಂಪತಿಯ ಜೇಷ್ಠ ಪುತ್ರರಾಗಿರುವ ಇವರು ಸುಳ್ಯದ ಅರಂಬೂರಿನ ಭಾರದ್ವಾಜಾಶ್ರಮದ ಕಾಂಚಿ ಕಾಮಕೋಟಿ ವೇದ ವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ. ಅಲ್ಲದೇ, ವೇದವಾಹಿನಿ ಎಂಬ ಆನ್ ಲೈನ್ ವೇದ ತರಗತಿಗಳ ಮೂಲಕ ವೇದಪಾಠವನ್ನು ದೇಶ ವಿದೇಶಗಳ ಶಿಷ್ಯರಿಗೆ ನಿರಂತರ 4 ವರ್ಷಗಳಿಂದ ನಡೆಸುತ್ತಿದ್ದಾರೆ.
- Advertisement -