Friday, June 5, 2026
Homeಕರಾವಳಿಬಂಟ್ವಾಳ: ಮನೆಯ ಹೊರಗೆ ತೊಳೆದು ಇಟ್ಟಿದ್ದ ಪಾತ್ರೆಗಳು ಕಳವು

ಬಂಟ್ವಾಳ: ಮನೆಯ ಹೊರಗೆ ತೊಳೆದು ಇಟ್ಟಿದ್ದ ಪಾತ್ರೆಗಳು ಕಳವು

- Advertisement -
- Advertisement -

ಬಂಟ್ವಾಳ: ಒಂಟಿ ಮಹಿಳೆ ವಾಸವಿದ್ದ ಮನೆಯೊಂದರ ಹೊರಗಡೆ ತೊಳೆದು ಒಣಗಲು ಇಟ್ಟಿದ್ದ ಪಾತ್ರೆಗಳನ್ನು ಕಳ್ಳತನ ಮಾಡಿರುವ ಘಟನೆ ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ಅಗರಗಂಡಿ ಬಳಿಯ ಹಂಡೀರಿನಲ್ಲಿ ನಡೆದಿದೆ.

ಹಂಡೀರು ನಿವಾಸಿ ಮುತ್ತು ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಒಬ್ಬಂಟಿಯಾಗಿ ವಾಸಿಸುತ್ತಿರುವ ಅವರು ಮನೆಯ ಸಮೀಪದಲ್ಲೇ ಇರುವ ಮಗಳ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ.

ಸ್ನಾನ ಮಾಡಲು ಉಪಯೋಗಿಸುವ ದೊಡ್ಡ ಹಂಡೆ, ಅಡುಗೆಯ 3 ಪಾತ್ರೆಗಳು, 2 ಫೈಬರ್‌ ಕುರ್ಚಿಗಳನ್ನು ಕಳವು ಮಾಡಲಾಗಿದ್ದು, ಅದರ ಮೌಲ್ಯ ಒಟ್ಟು 3,500 ರೂ. ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!