Monday, May 6, 2024
Homeತಾಜಾ ಸುದ್ದಿಉತ್ತರಾಖಂಡ ಹಿಮದುರಂತ: 32ಕ್ಕೇರಿದ ಸಾವನ್ನಪ್ಪಿದವರ ಸಂಖ್ಯೆ, 197 ಜನ ನಾಪತ್ತೆ

ಉತ್ತರಾಖಂಡ ಹಿಮದುರಂತ: 32ಕ್ಕೇರಿದ ಸಾವನ್ನಪ್ಪಿದವರ ಸಂಖ್ಯೆ, 197 ಜನ ನಾಪತ್ತೆ

spot_img
- Advertisement -
- Advertisement -

ಚಮೊಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ, 197 ಜನ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉತ್ತರಪ್ರದೇಶದ ಲಖಿಂಪುರದ ಕಾರ್ಮಿಕರು ಚಮೋಲಿಯಲ್ಲಿ ಕಾಣೆಯಾಗಿದ್ದು, ಇದುವರೆಗೆ ಒಟ್ಟು 32 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 197 ಜನರು ನಾಪತ್ತೆಯಾಗಿದ್ದು, ಕಾಣೆಯಾದವರನ್ನು ರಕ್ಷಿಸಲು ವಿವಿಧ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಕಾಣೆಯಾದ 1977 ಮಂದಿಯಲ್ಲಿ ಹೈಡಲ್ ಪವರ್ ಪ್ರಾಜೆಕ್ಟ್ ಸೈಟ್‌ಗಳಲ್ಲಿ ಕೆಲಸ ಮಾಡುವವರು ಮತ್ತು ಹತ್ತಿರದ ಗ್ರಾಮಸ್ಥರು ಸೇರಿದ್ದಾರೆ. ಅವರ ಮನೆಗಳು ನೀರಿನ ಬಲದಿಂದ ಕೊಚ್ಚಿ ಹೋಗಿವೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.

ಹಲವಾರು ರಕ್ಷಣಾ ತಂಡಗಳು ಚಮೋಲಿಯಲ್ಲಿನ ತಪೋವನ ವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ ಕನಿಷ್ಠ 30 ಕಾರ್ಮಿಕರ ಜೀವರಕ್ಷಣೆಗಾಗಿ ಸಮರೋಪಾದಿಯಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಕಾರ್ಮಿಕರು 12 ಅಡಿ ಎತ್ತರ ಹಾಗೂ 2.5ಕಿ.ಮೀ.ಉದ್ದದ ‘ಹೆಡ್ ರೇಸ್ ಟನೆಲ್ ‘ನಲ್ಲಿ ಸಿಕ್ಕಿಕೊಂಡಿದ್ದಾರೆ.

ಸುರಂಗದೊಳಗೆ ಆಮ್ಲಜನಕದ ಪ್ರಮಾಣವು ತುಂಬಾ ಕಡಿಮೆ ಇರುವುದರಿಂದ ಒಳಗೆ ಸಿಲುಕಿಕೊಂಡವರು ಬದುಕಿ ಉಳಿಯುವ ಸಾಧ್ಯತೆ ತೀರಾ ವಿರಳ ಎಂದೂ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಹೇಳುತ್ತಿದ್ದಾರೆ.

- Advertisement -
spot_img

Latest News

error: Content is protected !!