ನವದೆಹಲಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದ ನಟಿ ಊರ್ವಶಿ ರೌತೆಲಾ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ನಟಿ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ತನ್ನ ಫೇಸ್‌ಬುಕ್ ಖಾತೆಯಿಂದ ಬಂದ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸದಂತೆ ಅವರು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು.
“ನನ್ನ ಫೇಸ್‌ಬುಕ್ ಅನ್ನು ಹ್ಯಾಕ್ ಮಾಡಲಾಗಿದೆ ದಯವಿಟ್ಟು ಯಾವುದೇ ಸಂದೇಶಗಳಿಗೆ ಅಥವಾ ಪೋಸ್ಟ್‌ಗೆ ಪ್ರತಿಕ್ರಿಯಿಸಬೇಡಿ ಏಕೆಂದರೆ ಅದು ನಾನು ಅಥವಾ ನನ್ನ ಫೇಸ್ ಬುಕ್ ತಂಡದಿಂದ ಮಾಡಲ್ಪಟ್ಟಿಲ್ಲ” ಎಂದು ನಟಿ ಟ್ವೀಟ್ ಮಾಡಿದ್ದಾರೆ.
ಅಶ್ಲೀಲ ವಿಷಯವನ್ನು ಒಳಗೊಂಡ ಕೆಲವು ಪೋಸ್ಟ್‌ಗಳು ಖಾತೆಯಿಂದ ಬರಲು ಪ್ರಾರಂಭಿಸಿದಾಗ ಉರ್ವಶಿ ತನ್ನ ಫೇಸ್‌ಬುಕ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಅರಿತುಕೊಂಡರು. ಈ ವಿಷಯದ ಬಗ್ಗೆ ತಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಮುಂಬೈ ಪೊಲೀಸರು ಊರ್ವಶಿಗೆ ಮಾಹಿತಿ ನೀಡಿದ್ದಾರೆ, ಸೈಬರ್ ಪೊಲೀಸ್ ಸೆಲ್‌ನಲ್ಲಿ ದೂರು ದಾಖಲಿಸಲಾಗಿದೆ.
‘ನಾವು ನಿಮ್ಮ ದೂರನ್ನು ಸೈಬರ್ ಪೊಲೀಸ್ ಠಾಣೆಗೆ ಕಳುಹಿಸಿದ್ದೇವೆ” ಎಂದು ಮುಂಬೈ ಪೊಲೀಸರು ಟ್ವಿಟ್ಟರ್ ನಲ್ಲಿ ಊರ್ವಶಿಗೆ ಮಾಹಿತಿ ನೀಡಿದ್ದಾರೆ.
ಬಾಲಿವುಡ್ ನಟಿ ಮತ್ತು ಮಾಜಿ ಸೌಂದರ್ಯ ರಾಣಿ ಊರ್ವಶಿ ರೌತೆಲಾ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ನ್ನೇ ಸೃಷ್ಟಿಸಿದ್ದಾರೆ.ಅವರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ.