Monday, September 21, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ಇಬ್ಬರು ಮಕ್ಕಳನ್ನು ಬಾವಿಗೆಸೆದ ಪ್ರಕರಣ; ಆರೋಪಿ ಮಹಿಳೆಗೆ ನ್ಯಾಯಾಂಗ ಬಂಧನ

ಉಪ್ಪಿನಂಗಡಿ; ಇಬ್ಬರು ಮಕ್ಕಳನ್ನು ಬಾವಿಗೆಸೆದ ಪ್ರಕರಣ; ಆರೋಪಿ ಮಹಿಳೆಗೆ ನ್ಯಾಯಾಂಗ ಬಂಧನ

- Advertisement -
- Advertisement -

ಉಪ್ಪಿನಂಗಡಿ: ಪೆರ್ನೆ ಗ್ರಾಮದ ಮೈರಕಟ್ಟೆಯಲ್ಲಿ ಇಬ್ಬರು ಕಂದಮ್ಮಗಳನ್ನು ಬಾವಿಗೆ ಎಸೆದು, ಒಬ್ಬ ಮಗುವಿನ ಸಾವಿಗೆ ಕಾರಣಳಾದ ಆರೋಪಿತೆ ನೂರುನ್ನಿಸಾಗೆ ಪುತ್ತೂರು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಮೈರಕಟ್ಟೆ ನಿವಾಸಿ ಸಿನಾನ್ ಹಾಗೂ ಆತನ ಪತ್ನಿ ನೂರುನ್ನಿಸಾ ನಡುವೆ ಫೋನ್‌ನಲ್ಲಿ ತೀವ್ರ ಗಲಾಟೆ ನಡೆದಿತ್ತು. ಇದರಿಂದ ಕೋಪಗೊಂಡ ನೂರುನ್ನಿಸಾ, ತನ್ನ ಮೂರುವರೆ ವರ್ಷದ ಹೆಣ್ಣು ಮಗು ಹಾಗೂ ಪತಿಯ ತಂಗಿಯ ಮೂರು ವರ್ಷದ ಗಂಡು ಮಗುವನ್ನು ಸಮೀಪದ ಬಾವಿಗೆ ಎಸೆದಿದ್ದಳು.

ವಿಷಯ ತಿಳಿದ ತಕ್ಷಣ ಸ್ಥಳೀಯರು ಧಾವಿಸಿ ಮಕ್ಕಳನ್ನು ಬಾವಿಯಿಂದ ಮೇಲಕ್ಕೆತ್ತಿದರಾದರೂ, ಪತಿಯ ತಂಗಿಯ ಮಗು ರಬೀಜ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ನೂರುನ್ನಿಸಾಳ ಹೆಣ್ಣು ಮಗುವನ್ನು ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ದೂರಿನನ್ವಯ ಉಪ್ಪಿನಂಗಡಿ ಪೊಲೀಸರು ಆರೋಪಿ ನೂರುನ್ನಿಸಾಳನ್ನು ಬಂಧಿಸಿ, ಸೆಪ್ಟೆಂಬರ್ 20 ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿತೆಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!