Monday, September 21, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವೇಣೂರಿನಲ್ಲಿ ತೆರೆದ ಬಾವಿಗೆ ಬಿದ್ದ ಚಿರತೆ ಯಶಸ್ವಿ ರಕ್ಷಣೆ

ಬೆಳ್ತಂಗಡಿ : ವೇಣೂರಿನಲ್ಲಿ ತೆರೆದ ಬಾವಿಗೆ ಬಿದ್ದ ಚಿರತೆ ಯಶಸ್ವಿ ರಕ್ಷಣೆ

- Advertisement -
- Advertisement -

ಬೆಳ್ತಂಗಡಿ: ಕರಿಮಣೇಲು ಗ್ರಾಮದ ಬಕ್ಯಾರಡ್ಡ ನಿವಾಸಿ ಡೊಂಬಯ್ಯ ಪೂಜಾರಿ ಮಗ ಅಶೋಕ್ ಪೂಜಾರಿ ಅವರಿಗೆ ಸೇರಿದ ತೆರೆದ ಬಾವಿಗೆ ಚಿರತೆಯೊಂದು ಸೆ.21 ರಂದು ಆಕಸ್ಮಿಕವಾಗಿ ಬಿದ್ದ ಘಟನೆ ನಡೆದಿದೆ.

ಸುಮಾರು 30 ಅಡಿ ಆಳವಿದ್ದ ಬಾವಿಯಲ್ಲಿ ಸುಮಾರು 6 ಅಡಿಯಷ್ಟು ನೀರು ಇದ್ದು, ಚಿರತೆ ಬಾವಿಯೊಳಗೆ ಸಿಲುಕಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ವೇಣೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಕುಂದಾಪುರ ಡಿಎಫ್‌ಒ ರುದ್ರನ್ (IFS) ಹಾಗೂ ಮೂಡುಬಿದಿರೆ ಎಸಿಎಫ್ ಆಕಾಶ್ ಕದಮ್ (IFS) ಅವರ ಮಾರ್ಗದರ್ಶನದಲ್ಲಿ, ಮಂಗಳೂರಿನ ವನ್ಯಜೀವಿ ಪಶುವೈದ್ಯೆ ಡಾ. ಯಶಸ್ವಿನಿ ಅವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

ವನ್ಯಜೀವಿ ರಕ್ಷಣಾ ಬಲೆ ಹಾಗೂ ಚಿರತೆ ರಕ್ಷಣಾ ಪಂಜರವನ್ನು ಬಳಸಿ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಚಿರತೆಯನ್ನು ಬಾವಿಯಿಂದ ಸಂಜೆ ವೇಳೆಗೆ ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾದರು.

ರಕ್ಷಿಸಲಾದ ಚಿರತೆ ಹೆಣ್ಣು ಜಾತಿಯದ್ದಾಗಿದ್ದು, ಸುಮಾರು 3 ವರ್ಷ ವಯಸ್ಸಿನದು ಎಂದು ತಿಳಿದುಬಂದಿದೆ. ಪಶುವೈದ್ಯರು ನಡೆಸಿದ ಆರೋಗ್ಯ ತಪಾಸಣೆಯಲ್ಲಿ ಚಿರತೆ ಉತ್ತಮ ಆರೋಗ್ಯದಲ್ಲಿದ್ದು, ಅದನ್ನು ಕಾಡಿಗೆ ಬಿಡಲು ಸೂಕ್ತ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಯಿಂದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

- Advertisement -

Latest News

error: Content is protected !!