Sunday, May 5, 2024
Homeಕರಾವಳಿಉಪ್ಪಿನಂಗಡಿ: ಕಲ್ಲೇರಿ ಜನತಾ ಕಾಲೋನಿ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್

ಉಪ್ಪಿನಂಗಡಿ: ಕಲ್ಲೇರಿ ಜನತಾ ಕಾಲೋನಿ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್

spot_img
- Advertisement -
- Advertisement -

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ.

45 ವರ್ಷದ ಈ ಮಹಿಳೆಯು ಈ ಮೊದಲೇ ಉಬ್ಬಸ ರೋಗದಿಂದ ಬಳಳುತ್ತಿದ್ದು, ಮೇ.30ರಂದು ಅವರು ಮಂಗಳೂರಿನ ಖಾಸಾಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ಅವರ ಗಂಟಲ ದ್ರವವನ್ನು ಪರೀಕ್ಷೆ ನಡೆಸಿದ್ದು, ಅದರ ವರದಿ ಬಂದಾಗಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಕಲ್ಲೇರಿ ಜನತಾ ಕಾಲೋನಿಯಲ್ಲಿ ಕಳೆದ ಸುಮಾರು 1 ತಿಂಗಳ ಹಿಂದೆಯೇ ಯುವಕನೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಹಲವು ದಿನಗಳ ಕಾಲ ಆ ಪ್ರದೇಶವು ಸೀಲ್‌ಡೌನ್‌ಗೆ ಒಳಗಾಗಿತ್ತು. ಬಳಿಕ ಯುವಕ ಗುಣಮುಖನಾಗಿದ್ದು, ನಂತರ ಸೀಲ್‌ಡೌನ್‌ನನ್ನು ತೆರವುಗೊಳಿಸಲಾಗಿತ್ತು. ಇದೀಗ ಕೊರೋನಾ ಪಾಸಿಟಿವ್ ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಮತ್ತೊಮ್ಮೆ ಕಲ್ಲೇರಿ ಜನತಾ ಕಾಲೋನಿ ಪರಿಸರವು ಸೀಲ್‌ಡೌನ್‌ಗೆ ಒಳಗಾಗುವ ಸಾಧ್ಯತೆಯಿದೆ.

- Advertisement -
spot_img

Latest News

error: Content is protected !!