- Advertisement -
- Advertisement -
ಹೈದರಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕಾಲ್ತುಳಿತ ಪ್ರಕರಣದಲ್ಲಿ ಬಂಧನವಾಗಿದ್ದು, ಇದೀಗ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದು, ಇದರ ಬೆನ್ನಲ್ಲೇ ಕನ್ನಡ ನಟ- ನಿರ್ದೇಶಕ ಉಪೇಂದ್ರ ಅವರು ಅಲ್ಲು ಅರ್ಜುನ್ ಅವರನ್ನು ಭೇಟಿ ಆಗಿದ್ದಾರೆ.
ಉಪೇಂದ್ರ ಅವರ ʼಯುಐʼ ಸಿನಿಮಾ ಇದೇ ತಿಂಗಳಿನಲ್ಲಿ ರಿಲೀಸ್ ಆಗಲಿದ್ದು, ಈ ನಿಟ್ಟಿನಲ್ಲಿ ಸಿನಿಮಾ ತಂಡ ಈಗಾಗಲೇ ಆಂಧ್ರ ದಲ್ಲಿ ಪ್ರಮೋಷನ್ ನಲ್ಲಿ ನಿರತವಾಗಿದೆ. ಈಗಾಗಿ ಭೇಟಿ ಮಾಡಿರಬಹುದು ಎನ್ನಲಾಗಿದೆ. ಇನ್ನು ʼಯುಐʼ ಚಿತ್ರದ ತೆಲುಗು ವಿತರಣೆ ಹಕ್ಕನ್ನು ಅಲ್ಲು ಅರವಿಂದ್ ಮಾಲೀಕತ್ವದ ಮೈತ್ರಿ ಮೂವಿ ಮೇಕರ್ಸ್ ಖರೀದಿಸಿದ್ದು, ಹೀಗಾಗಿ ಟಾಲಿವುಡ್‌ನಲ್ಲಿ ಕನ್ನಡ ʼಯುಐʼಗೆ ಭರ್ಜರಿ ಬೆಂಬಲ ಸಿಗುವ ನಿರೀಕ್ಷೆಯಿದೆ.
ಜೈಲಿನಿಂದ ಬಿಡುಗಡೆಗೊಂಡ ಮೇಲೆ ಅಲ್ಲು ಅರ್ಜುನ್, ಸೆಲೆಬ್ರಿಟಿಗಳು, ಅಭಿಮಾನಿಗಳನ್ನ ತಮ್ಮ ನಿವಾಸದಲ್ಲಿ ಭೇಟಿ ಆಗಿದ್ದಾರೆ ಎನ್ನಲಾಗಿದೆ.
- Advertisement -