- Advertisement -
- Advertisement -
ಬುಲಂದ್‌ಶಹರ್: ಇತ್ತೀಚಿಗೆ ಮಹಾರಾಷ್ಟ್ರದ ಫಾಲ್ಘರ್ ಪ್ರದೇಶದ ಇಬ್ಬರು ಸಾಧುಗಳು ಮತ್ತು ಓರ್ವ ಚಾಲಕನ ಗುಂಪು ಹತ್ಯೆ ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿತ್ತು, ಇದೀಗ ಪುನಃ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಪಾಗೊನಾ ಗ್ರಾಮದ ಶಿವ ದೇಗುಲದಲ್ಲಿ ಇಬ್ಬರು ಸಾಧುಗಳ ಮೃತದೇಹ ದೊರೆತಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ದೇಗುಲಕ್ಕೆ ತೆರಳಿದ ಭಕ್ತರಿಗೆ ರಕ್ತಸಿಕ್ತವಾದ ಮೃತದೇಹಗಳು ಗೋಚರಿಸಿವೆ, ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತರನ್ನು ಜಗನ್‌ದಾಸ್ (55) ಮತ್ತು ಸೇವಾದಾಸ್ (35) ಎಂದು ಗುರುತಿಸಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ
- Advertisement -