Monday, June 8, 2026
Homeತಾಜಾ ಸುದ್ದಿಬಂಟ್ವಾಳದಲ್ಲಿ ಅವೈಜ್ಞಾನಿಕ ಮಣ್ಣು ಅಗೆತ: ಕುಡಿಯುವ ನೀರಿನ ಟ್ಯಾಂಕ್ ಕುಸಿತದ ಭೀತಿ

ಬಂಟ್ವಾಳದಲ್ಲಿ ಅವೈಜ್ಞಾನಿಕ ಮಣ್ಣು ಅಗೆತ: ಕುಡಿಯುವ ನೀರಿನ ಟ್ಯಾಂಕ್ ಕುಸಿತದ ಭೀತಿ

- Advertisement -
- Advertisement -

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಉಪ್ಪುಗುಡ್ಡೆಯಲ್ಲಿರುವ ಪುರಸಭೆಗೆ ಸೇರಿದ ಸಮಗ್ರ ಕುಡಿಯುವ ನೀರು ಸರಬರಾಜಿನ ಬೃಹತ್ ಟ್ಯಾಂಕ್ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಜಮೀನಿನವರು ಟ್ಯಾಂಕ್ ಅಡಿಭಾಗದಲ್ಲಿನ ಮಣ್ಣನು ಅವೈಜ್ಞಾನಿಕವಾಗಿ ಅಗೆದಿರುವುದು ಟ್ಯಾಂಕ್ ಕುಸಿತದ ಭೀತಿ ಎದುರಿಸಲು ಕಾರಣವಾಗಿದೆ. ಇನ್ನು ಟ್ಯಾಂಕ್ ಕುಸಿದರೆ ಈ ಭಾಗದ ಪ್ರದೇಶಗಳಿಗೆ ಹೊಸ ಟ್ಯಾಂಕ್ ನಿರ್ಮಾಣವಾಗುವ ವರೆಗೆ ನೀರಿನ ಪೂರೈಕೆ ಕಡಿತಗೊಳ್ಳಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ಖಾಸಗಿ ಜಮೀನಿನವರು ಪುರಸಭೆ ಅಧಿಕಾರಿಗಳ ಸೂಚನೆಯನ್ನೂ ಲೆಕ್ಕಿಸದೆ ಅವೈಜ್ಞಾನಿಕವಾಗಿ ಮತ್ತಷ್ಟು ಮಣ್ಣು ಅಗೆದಿರುವುದರಿಂದ ಇದೀಗ ಪುರಸಭಾ ಟ್ಯಾಂಕ್ ಕುಸಿತದ ಅಪಾಯ ಎದುರಿಸುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪುರಸಭಾಡಳಿತ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರಾದರೂ ಟ್ಯಾಂಕ್ ಕುಸಿತ ಭೀತಿ ತಪ್ಪಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇಂತಹ ಅನಾಹುತಕಾರಿ ಸನ್ನಿವೇಶಗಳು ರಾಜಕೀಯ ಪ್ರಭಾವಗಳಿಗೆ ಬಲಿಯಾಗಿ ಅಧಿಕಾರಿಗಳು ವಾಸ್ತವಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಕಾರಣಗಳಿಂದ ಎದುರಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!