ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡಿದ ವಾಹನಗಳ ಸವಾರರಿರಿಗೆ ಇಂದು ಬೆಳ್ತಂಗಡಿ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ.
ಬೆಳ್ತಂಗಡಿ ಠಾಣೆಯ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಎಸ್.ಐ ನಂದಕುಮಾರ್ ಎಂ.ಎ, ಧರ್ಮಸ್ಥಳ ಠಾಣೆ ಎಸ್.ಐ.ಓಡಿಯಪ್ಪ, ಬೆಳ್ತಂಗಡಿ ಸಂಚಾರಿ ಠಾಣೆ ಉಪ ನಿರೀಕ್ಷಕರಾದ ಆರತಿ ಮತ್ತು ಪವನ್ ಕುಮಾರ್, ಪೂಂಜಾಲಕಟ್ಟೆ ಉಪನಿರೀಕ್ಷಕಿ ಸೌಮ್ಯಾ, ವೇಣೂರು ಠಾಣೆ ಉಪನಿರೀಕ್ಷಕ ಲೋಲಾಕ್ಷ ನೇತೃತ್ವದಲ್ಲಿ ಸಿಬಂದಿಗಳು ಕಾರ್ಯಾಚರಣೆ ನೆಡೆಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಬೆಳ್ತಂಗಡಿ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿ ಮಂಗಳವಾರ ಒಂದು ದಿನ ಒಟ್ಟು 36 ವಾಹನಗಳನ್ನು ವಶಕ್ಕೆ ಪಡೆದು 36 ಸಾವಿರ ರೂ.ದಂಡ ಸಂಗ್ರಹಿಸಲಾಗಿದೆ. ಇದಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಸರಕಾರದ ಸೂಚನೆಯಂತೆ ಇನ್ನಷ್ಟು ಕಟ್ಟುನಿಟ್ಟಿನಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚಿನ ವಾಹನ ಸವಾರರು ವಾಹನಗಳ ಮುಂದೆ ತಾವೇ ಅನುಮತಿ ಪತ್ರ ಮುದ್ರಿಸಿ ವಾಹನಕ್ಕೆ ಲಗತ್ತಿಸಿ ಸಂಚರಿಸುತ್ತಿರುವುದು ಬಂದಿದೆ.
