Saturday, June 28, 2025
Homeಕರಾವಳಿಮಂಗಳೂರುಪುತ್ತೂರು; ಹಾರಾಡಿಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೆ ನುಗ್ಗಿದ ಯುವಕ; ಸಿಸಿ ಕ್ಯಾಮೆರಾದಲ್ಲಿ ಅಪರಿಚಿತನ ಚಲನವಲನ ಸೆರೆ

ಪುತ್ತೂರು; ಹಾರಾಡಿಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೆ ನುಗ್ಗಿದ ಯುವಕ; ಸಿಸಿ ಕ್ಯಾಮೆರಾದಲ್ಲಿ ಅಪರಿಚಿತನ ಚಲನವಲನ ಸೆರೆ

spot_img
- Advertisement -
- Advertisement -

ಪುತ್ತೂರು; ಅಪರಿಚಿತ ಯುವಕನೊಬ್ಬ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೆ ನುಗ್ಗಿದ ಘಟನೆ ಹಾರಾಡಿಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ನಡೆದಿದೆ.

ಅಪರಿಚಿತ ಯುವಕನೋರ್ವ ನ. 6ರಂದು ಮಧ್ಯರಾತ್ರಿ ನುಗ್ಗಿದ್ದು, ಈ ದೃಶ್ಯವು ಇಲ್ಲಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.ಮಂಗಳವಾರ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ನ.6ರಂದು ಮಧ್ಯರಾತ್ರಿ ಸುಮಾರು 2:30 ರಿಂದ 3:30 ತನಕ ಹಾಸ್ಟೆಲ್ ಒಳಗೆ ಉಳಿದುಕೊಂಡಿದ್ದ. ಈ ವೇಳೆ ಈತನ ಚಲನವಲನವನ್ನು ಬಾಲಕಿಯೋರ್ವಳು ವಿಡಿಯೋ ಮಾಡಿದ್ದಾಳೆ. ಬಳಿಕ ಹಾಸ್ಟೆಲ್‍ನ ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಈ ದೃಶ್ಯ ಹಾಸ್ಟೆಲ್‍ನಲ್ಲಿ ಇರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಈ ಬಗ್ಗೆ ವಿದ್ಯಾರ್ಥಿ ನಿಯಲದ ಮೇಲ್ವಿಚಾರಕರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ.10ರಂದು ದೂರು ಪಡೆದು ಕೊಂಡಿರುವ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!