Monday, June 8, 2026
Homeತಾಜಾ ಸುದ್ದಿಕೊರೋನಾ ಭೀತಿಯಲ್ಲಿ ಕೇಂದ್ರ ಸಚಿವ ಪ್ರತಾಪ್ ಸಾರಂಗಿ, ಮನೆಯಲ್ಲೇ ಸ್ವಯಂ ಕ್ವಾರಂಟೈನ್

ಕೊರೋನಾ ಭೀತಿಯಲ್ಲಿ ಕೇಂದ್ರ ಸಚಿವ ಪ್ರತಾಪ್ ಸಾರಂಗಿ, ಮನೆಯಲ್ಲೇ ಸ್ವಯಂ ಕ್ವಾರಂಟೈನ್

- Advertisement -
- Advertisement -

ನವದೆಹಲಿ: ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಪ್ರತಾಪ್ ಸಾರಂಗಿ ಅವರಿಗೂ ಡೆಡ್ಲಿ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ.

ಪ್ರಸ್ತುತ ಒಡಿಶಾದ ಬಾಲಸೂರ್ ಸಂಸದರೂ ಆಗಿರುವ ಕೇಂದ್ರ ಸಚಿವ ಸಾರಂಗಿ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಕ್ವಾರಂಟೈನ್ (ಪ್ರತ್ಯೇಕ ವಾಸ)ನಲ್ಲಿದ್ದಾರೆ. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

ಒಡಿಶಾದ ಬಿಜೆಪಿ ಶಾಸಕ ಸುಖಾಂತ್‍ಕುಮಾರ್ ನಾಯಕ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರೊಂದಿಗೆ ಸಾರಂಗಿ ಎರಡು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರು. ನಂತರ ಕೇಂದ್ರ ಸಚಿವರು ಅಸೌಖ್ಯತೆಯಿಂದ ಬಳಲಿದರು. ವೈದ್ಯರು ನನ್ನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ಸಾರಂಗಿ ಟ್ವಿಟ್ ಮಾಡಿದ್ದಾರೆ. ಸಚಿವರ ಕೊರೊನಾ ವೈರಸ್ ಸೋಂಕು ಪರೀಕ್ಷೆ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

- Advertisement -

Latest News

error: Content is protected !!