Tuesday, July 1, 2025
Homeಕರಾವಳಿಬೆಳ್ಳಾರೆಯಲ್ಲಿ ಸುರಿದ ಭಾರಿ ಮಳೆ: ರಸ್ತೆ ಕೆಸರುಮಯ

ಬೆಳ್ಳಾರೆಯಲ್ಲಿ ಸುರಿದ ಭಾರಿ ಮಳೆ: ರಸ್ತೆ ಕೆಸರುಮಯ

spot_img
- Advertisement -
- Advertisement -

ಬೆಳ್ಳಾರೆ: ನಗರದ ಮೇಲಿನ ಪೇಟೆ ಸಿಂಡಿಕೇಟ್ ಬ್ಯಾಂಕ್ ಸಮೀಪ ಇಂದು ಮುಂಜಾನೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ತುಂಬಿ ಕೆಸರುಮಯವಾಗಿದೆ.
ಪ್ರತೀ ವರ್ಷವೂ ಇಲ್ಲಿ ಮಳೆಗಾಲದಲ್ಲಿ ನೀರು ನಿಂತು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಈ ವರ್ಷವಾದರೂ ಇಲಾಖೆ ಗಮನ ಹರಿಸಿ ಸರಿಯಾದ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.

ಲಾಕ್ ಡೌನ್ ಇಲ್ಲದಿದ್ದರೆ ಈ ಪೇಟೆಯಲ್ಲಿ ಸಾವಿರಾರು ಜನ ಸಂಚಾರ ನಡೆಸುತ್ತಿದ್ದು, ವಿವಿಧ ಭಾಗಗಳಿಗೆ ತೆರಳಲು ಈ ರಸ್ತೆಯನ್ನೇ ಬಳಸುತ್ತಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಪೇಟೆಯ ಗ್ರಾಹಕರು ಈ ರಸ್ತೆಯಲ್ಲಿ ನಡೆದುಕೊಂಡು ಸಾಗುತ್ತಾರೆ. ಇದೀಗ ರಸ್ತೆ ಕೆಸರುಮಯವಾಗಿ ಸಂಚಾರ ಅಸಾಧ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!