Thursday, June 4, 2026
Homeಕರಾವಳಿರಮ್ ಕುಡಿದ್ರೆ ಕೊರೋನಾ ನಮ್ಮ ಹತ್ರ ಬರಲ್ಲ ಎಂದು ಸಲಹೆ ನೀಡಿದ ಉಳ್ಳಾಲ ನಗರಸಭಾ ಸದಸ್ಯ..!

ರಮ್ ಕುಡಿದ್ರೆ ಕೊರೋನಾ ನಮ್ಮ ಹತ್ರ ಬರಲ್ಲ ಎಂದು ಸಲಹೆ ನೀಡಿದ ಉಳ್ಳಾಲ ನಗರಸಭಾ ಸದಸ್ಯ..!

- Advertisement -
- Advertisement -

ಉಳ್ಳಾಲ: ಕೋಡೇಸ್ ರಮ್ಗೆ ಎಡ್ಡೆ ಮುಂಚಿ(ಕರಿಮೆಣಸು)ಸೇರಿಸಿ ಕೈಯಲ್ಲಿ ಮಿಕ್ಸ್ ಮಾಡಿ. ಅದರ ಜೊತೆಗೆ ಎರಡು ಮೊಟ್ಟೆಗೆ ಕರಿಮೆಣಸು ಸೇರಿಸಿ ಹಾಫ್ ಬಾಯ್ಲ್ಡ್ ಮಾಡಿ ರಮ್ ಜೊತೆ ಸೇವಿಸಿದರೆ ಕೊರೊನಾ ಹತ್ತಿರ ಸುಳಿಯಲ್ಲ ಎಂದು ಉಳ್ಳಾಲ ನಗರಸಭೆಯ ಕಾಂಗ್ರೆಸ್ ಸದಸ್ಯರೊಬ್ಬರು ನೀಡಿರುವ ಸಲಹೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಹೀಗೆಂದು ಬಿಟ್ಟಿ ಉಪದೇಶ ನೀಡಿದ ಉಳ್ಳಾಲ ನಗರಸಭೆಯ ಕಾಂಗ್ರೆಸ್ ಸದಸ್ಯ ಪಾನಕ ರವಿ ಯಾನೆ ರವಿಚಂದ್ರ ಗಟ್ಟಿ.

ವಿಡಿಯೋದಲ್ಲಿ ಹೇಳಿರುವುದೇನು ?
ಬೆಂಗಳೂರಿಗರು, ಕೊಡಗಿನವರು ರಮ್ ಕುಡಿಯುತ್ತಾರೆ, ನಾನು ಕುಡಿಯುದಿಲ್ಲ, ಮೀನು ತಿನ್ನುವುದಿಲ್ಲ. ಕೋಡೇಸ್ ರಮ್ಗೆ ಒಂದು ಚಮಚ ಕರಿಮೆಣಸು ಹುಡಿ ಹಾಕಿ ಅದನ್ನು ಕೈಯಲ್ಲೇ ಮಿಕ್ಸ್ ಮಾಡಿ. ನಂತರ ಇದರ ಜೊತೆ ಚಪ್ಪರಿಸಲು ಎರಡು ಮೊಟ್ಟೆಗೆ ಕರಿಮೆಣಸು ಸೇರಿಸಿ ಹಾಫ್ ಬಾಯ್ಲ್ಡ್ ಮಾಡಿ ತಿನ್ನಿ. ಕೊರೋನಾ ಬರಲ್ಲ. ವೈದ್ಯರು ಹಲವಾರು ರೀತಿಯ ಮದ್ದುಗಳನ್ನು ಸಲಹೆ ನೀಡುತ್ತಾರೆ. ಇದು ನನ್ನ ಸಲಹೆ ಎಂದು ಹೇಳಿದ್ದಾರೆ.

ತಾನೊಬ್ಬ ಕೊರೋನಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಎಂದು ಹೇಳಿಕೊಂಡಿರುವ ಪಾನಕ ರವಿಯವರ ಕೈಯಲ್ಲಿರುವುದು ಓಲ್ಡ್ ಮಂಕ್ ರಮ್ ಬಾಟಲಿ. ಆದರೆ ವಿಪರ್ಯಾಸ ಎಂಬಂತೆ ಒಬ್ಬ ನಗರಸಭಾ ಸದಸ್ಯನಾಗಿ ಇವರು ಅವರು ಕುಡಿಯಿರಿ ಎಂದು ಹೇಳುತ್ತಿರುವುದು ಕೊಡೇಸ್ ರಮ್.

ಯಾರು ಈ ಸದಸ್ಯ:
ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಉಳ್ಳಾಲ ಪರಿಸರದಲ್ಲಿ ಪಾನಕ ರವಿ ಎಂದೇ ಚಿರಪರಿಚಿತರಾಗಿರುವ ಉಳ್ಳಾಲ ನಗರಸಭಾ ಸದಸ್ಯ ರವಿಚಂದ್ರ ಗಟ್ಟಿ, ಕಾಂಗ್ರೆಸ್ ಪಕ್ಷದ ಬೆಂಬಲದಿಂದ ನಗರಸಭಾ ಸದಸ್ಯರಾಗಿದ್ದಾರೆ.

ಕಳೆದ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಕೆಟ್ ನೀಡಲು ನಿರಾಕಾರಿಸಿದರಿಂದ ಕಾಂಗ್ರೆಸ್ ಬೆಂಬಲದಿಂದ ಸ್ಪರ್ದಿಸಿ ನಗರಸಭೆ ಸದಸ್ಯರಾಗಿದ್ದರು.

ರಮ್ ಕುಡಿದ್ರೆ ಕೊರೋನಾ ನಮ್ಮ ಹತ್ರ ಬರಲ್ಲ ಎಂದು ಸಲಹೆ ನೀಡಿದ ಉಳ್ಳಾಲ ನಗರಸಭಾ ಸದಸ್ಯ

Posted by Maha Xpress on Thursday, 16 July 2020

- Advertisement -

Latest News

error: Content is protected !!