Thursday, June 4, 2026
Homeಕರಾವಳಿ'ಉಜಿರೆ ಸುರ್ಯಪಡ್ಪು ದನ ಸಾಗಾಟ ವೇಳೆ ಕಾರು ಪಲ್ಟಿ' ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಜಾಮೀನು ಮಂಜೂರು

‘ಉಜಿರೆ ಸುರ್ಯಪಡ್ಪು ದನ ಸಾಗಾಟ ವೇಳೆ ಕಾರು ಪಲ್ಟಿ’ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಜಾಮೀನು ಮಂಜೂರು

- Advertisement -
- Advertisement -

ಬೆಳ್ತಂಗಡಿ: ಉಜಿರೆ ಸುರ್ಯಪಡ್ಪು ಎಂಬಲ್ಲಿ ಕಸಾಯಿಖಾನೆಗೆ ದನ ಸಾಗಾಟ ಮಾಡುತ್ತಿದ್ದ ವೇಳೆ ಕಾರು ಪಲ್ಟಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಖರೀದಿಸಿದ ಗೋವನ್ನು ಇನ್ನೋವ ಕಾರಿನಲ್ಲಿ ತುಂಬಿಸಿ ಕಸಾಯಿಖಾನೆಗೆ ಸಾಗಿಸುವಾಗ ಬಜರಂಗದಳ ಕಾರ್ಯಕರ್ತರು ಗಾಡಿಯನ್ನು ತಡೆಯುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿತ್ತು

ಆರೋಪಿಗಳನ್ನು ಬಜರಂಗದಳದ ಕಾರ್ಯಕರ್ತರು ಹಾಗೂ ಊರಿನವರು ಸೇರಿ ಪೊಲೀಸರಿಗೆ ಒಪ್ಪಿಸಿದರು. ಕಾರಿನಲ್ಲಿದ್ದ ದನದ ಬ್ರೋಕರ್ ಶೇಖರ್ ಸುರ್ಯ, ಅಝೀಜ್ ಸರಳೀಕಟ್ಟೆ, ನಾಸೀರ್ ಮೂರು ಮಂದಿ ಪರಾರಿಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. ಅವರ ಪೈಕಿ ಅಝೀಜ್ ಹಾಗೂ ನಾಸೀರ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ಇಬ್ಬರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿಗಳ ಪರ ಜುಬೇದಾ ಸರಳಿಕಟ್ಟೆ ವಾದಿಸಿದ್ದರು.

- Advertisement -

Latest News

error: Content is protected !!