Saturday, June 6, 2026
Homeಕರಾವಳಿಉಜಿರೆ: ಪ್ರಸನ್ನ ಕುಮಾರ್ ಜೈನ್ ರ ಮೃತದೇಹದ ಗುರುತು ಪತ್ತೆ ಮಾಡಿದ ಪುತ್ರಿ

ಉಜಿರೆ: ಪ್ರಸನ್ನ ಕುಮಾರ್ ಜೈನ್ ರ ಮೃತದೇಹದ ಗುರುತು ಪತ್ತೆ ಮಾಡಿದ ಪುತ್ರಿ

- Advertisement -
- Advertisement -

ಉಜಿರೆ: ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಪ್ರಸನ್ನ ಕುಮಾರ್ ಅವರ ಮೃತದೇಹ ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಘಾಟ್ ನ ನಲ್ಲಿ ಹರಿಯುತ್ತಿರುವ ನದಿಯಲ್ಲಿ ಅನುಮಾನಾಸ್ಪದವಾಗಿ ರೀತಿಯಲ್ಲಿ ಪತ್ತೆಯಾಗಿತ್ತು.

ಘಾಟ್ ನ ರಸ್ತೆಯ ಪಕ್ಕವೇ ಪ್ರಸನ್ನ ಕುಮಾರ್ ರ ಬೈಕ್ ಕೂಡ ದೊರಕಿತ್ತು. ಆದರೆ ನದಿಯಲ್ಲಿ ಸಿಕ್ಕಿರುವ ಪ್ರಸನ್ನ ಕುಮಾರ್ ರ ಮೃತದೇಹ ಕೊಳೆತ ಮತ್ತು ವಸ್ತ್ರವಿಲ್ಲದ ಸ್ಥಿತಿಯಲ್ಲಿದ್ದ ಕಾರಣ, ದೇಹ ಅವರದ್ದೇ ಎಂದು ತಿಳಿಯುವುದು ಕಷ್ಟಕರವಾಗಿತ್ತು.

ಹಾಗೂ ಪ್ರಸನ್ನ ಕುಮಾರ್ ಜೈನ್ ಅವರ ಮೃತದೇಹ ದೊರೆತ ಜಾಗ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ್ದರಿಂದ ಮೃತದೇಹವನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು.

ನಂತರ ಪ್ರಸನ್ನ ಕುಮಾರ್ ಅವರ ಮಗಳು ತಂದೆಯ ಮೃತದೇಹದ ಗುರುತು ಹಿಡಿದಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!