Friday, June 26, 2026
Homeಕರಾವಳಿಶಿರ್ತಾಡಿಯಲ್ಲಿ ಭೀಕರ ಅಪಘಾತ : ಉಜಿರೆಯ ಭವಿತ್ ಶೆಟ್ಟಿ ನಿಧನ

ಶಿರ್ತಾಡಿಯಲ್ಲಿ ಭೀಕರ ಅಪಘಾತ : ಉಜಿರೆಯ ಭವಿತ್ ಶೆಟ್ಟಿ ನಿಧನ

- Advertisement -
- Advertisement -

ಬೆಳ್ತಂಗಡಿ : ಗೂಡ್ಸ್ ಆಟೋ ಹಾಗೂ ಲಾರಿ ನಡುವೆ ಮುಖಾಮುಖಿ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶಿರ್ತಾಡಿಯಲ್ಲಿ ನಡೆದಿದೆ.

ಉಜಿರೆಯ ನೇಕಾರ ಪೇಟೆಯ ನಿವಾಸಿ ಲಾಯಿಲ ತಾ.ಪಂ ಮಾಜಿ ಸದಸ್ಯೆ ಶೋಭಾ ಶೆಟ್ಟಿಯವರ ದ್ವೀತಿಯ ಪುತ್ರ ಭವಿತ್ ಶೆಟ್ಟಿ(33)ಮೃತ ದುರ್ದೈವಿ.

ಅಮೆಜಾನ್ ಕಂಪೆನಿಯಲ್ಲಿ ಮೂಡಬಿದ್ರೆಯಲ್ಲಿ ಉದ್ಯೋಗದಲ್ಲಿರುವ ಭವಿತ್ ಗೂಡ್ಸ್ ವಾಹನದಲ್ಲಿ ಪಾರ್ಸೆಲ್ ಡೆಲಿವರಿ ಕೊಟ್ಟು ಹಿಂದುರುಗುತ್ತಿದ್ದ ವೇಳೆ ಶಿರ್ತಾಡಿಯಲ್ಲಿ ಗೂಡ್ಸ್ ಆಟೋ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಭವಿತ್ ಶೆಟ್ಟಿ ಅವರಿಗೆ ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಅವರನ್ನು  ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಏಜೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಭವಿತ್ ಶೆಟ್ಟಿ  ಮೂರು ವರ್ಷದ ಹಿಂದೆ ದುಬೈ ನಲ್ಲಿ ಉದ್ಯೋಗದಲ್ಲಿದ್ದು ನಂತರ ಊರಿಗೆ ಬಂದು ಮದುವೆಯಾಗಿದ್ದರು. ಬಳಿಕ ಊರಿನಲ್ಲಿ ಉದ್ಯೋಗ ಮಾಡುತ್ತಿದ್ದರು.  ಇವರಿಗೆ ಒಂದು ಏಳು ತಿಂಗಳ ಮಗು ಕೂಡ ಇದೆ.                                                  

- Advertisement -

Latest News

error: Content is protected !!