Sunday, June 7, 2026
Homeಕರಾವಳಿಉಜಿರೆ ಅಮರ್ ಡ್ರಗ್ ಹೌಸ್ ನ ಮಾಲೀಕ ಕೇಶವ್ ಭಟ್ ಇನ್ನಿಲ್ಲ

ಉಜಿರೆ ಅಮರ್ ಡ್ರಗ್ ಹೌಸ್ ನ ಮಾಲೀಕ ಕೇಶವ್ ಭಟ್ ಇನ್ನಿಲ್ಲ

- Advertisement -
- Advertisement -

ಉಜಿರೆ  : ಉಜಿರೆಯ ಅಮರ್ ಡ್ರಗ್ ಹೌಸ್ ನ ಮಾಲೀಕ ಹಾಗೇ ಬೆಳ್ತಂಗಡಿ ತಾಲೂಕಿನ ಹಿರಿಯ ಔಷಧ ಮಾರಾಟಗಾರರು, ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾಗಿದ್ದ ಕೇಶವ್ ಭಟ್ (66) ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ವಿಧಿವಶರಾಗಿದ್ದಾರೆ.

ಇವರು ಉಜಿರೆಯಲ್ಲಿ ಕಳೆದ 40 ವರ್ಷಗಳಿಂದ  ಅಮರ್ ಡ್ರಗ್ ಹೌಸ್ ಎಂಬ ಔಷಧ ಮಾರಾಟ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಕೊಡುಗೈ ದಾನಿ ಎಂದೇ ಪ್ರಸಿದ್ಧರಾಗಿದ್ದರು.ಮೃತರು ಪತ್ನಿ ರತ್ನ, ಪುತ್ರ ಪ್ರದೀಪ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಗೌರವಾರ್ಥ ಬೆಳ್ತಂಗಡಿ ತಾಲೂಕಿನ ಎಲ್ಲಾ ಔಷಧ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!