Wednesday, July 3, 2024
Homeಪ್ರಮುಖ-ಸುದ್ದಿ2024ನೇ ಸಾಲಿನ ಯುಜಿಸಿ ಎನ್ಇಟಿ ಜೂನ್ ಸೆಷನ್ ಪರೀಕ್ಷೆ ರದ್ದು

2024ನೇ ಸಾಲಿನ ಯುಜಿಸಿ ಎನ್ಇಟಿ ಜೂನ್ ಸೆಷನ್ ಪರೀಕ್ಷೆ ರದ್ದು

spot_img
- Advertisement -
- Advertisement -

ನವದೆಹಲಿ: 2024ನೇ ಸಾಲಿನ ಯುಜಿಸಿ ಎನ್ ಇಟಿ ಜೂನ್ ಸೆಷನ್ ಪರೀಕ್ಷೆ ರದ್ದುಗೊಂಡಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ರಾಷ್ಟ್ರೀಯ ಸೈಬರ್ ಕ್ರೈಂ ಥ್ರೆಟ್ ಅನಾಲಿಟಿಕ್ಸ್ ಘಟಕ ಪರೀಕ್ಷಾ ಸಮಗ್ರತೆ ರಾಜಿಯಾಗಿದೆ ಎಂದು ನೀಡಿದ್ದ ಮಾಹಿತಿ ಆಧರಿಸಿ ಪರೀಕ್ಷೆ ರದ್ದುಗೊಂಡಿದೆ.

ಮರು ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಇಲಾಖೆ ತಿಳಿಸಿದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ugcnet.nta.ac.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಯುಜಿಸಿ ಎನ್ ಇಟಿ ಜೂನ್ ಸೆಷನ್ ಪರೀಕ್ಷೆಯನ್ನು ಜೂನ್ 18 ರಂದು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಓಎಂಆರ್ ಆಧಾರಿತವಾಗಿ ನಡೆಸಿತ್ತು. ‌83 ವಿಷಯಗಳಿಗೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

- Advertisement -
spot_img

Latest News

error: Content is protected !!