Sunday, June 7, 2026
Homeಕರಾವಳಿಉಡುಪಿಉಡುಪಿ: ಬಾವಿಗೆ ಬಿದ್ದ ವೃದ್ಧೆಯನ್ನು ಜೀವದ ಹಂಗು ತೊರೆದು ರಕ್ಷಿಸಿದ ಪಿಎಸ್‌ಐ, ಅಗ್ನಿಶಾಮಕ ಸಿಬ್ಬಂದಿ, ರಿಕ್ಷಾಚಾಲಕ

ಉಡುಪಿ: ಬಾವಿಗೆ ಬಿದ್ದ ವೃದ್ಧೆಯನ್ನು ಜೀವದ ಹಂಗು ತೊರೆದು ರಕ್ಷಿಸಿದ ಪಿಎಸ್‌ಐ, ಅಗ್ನಿಶಾಮಕ ಸಿಬ್ಬಂದಿ, ರಿಕ್ಷಾಚಾಲಕ

- Advertisement -
- Advertisement -
https://www.facebook.com/MahaXpressNews/videos/755143658639932/

ಉಡುಪಿ: ಆಕಸ್ಮಿಕವಾಗಿ ಮನೆಯ ಬಾವಿಗೆ ಬಿದ್ದ ವೃದ್ದೆಯೋರ್ವರನ್ನು ಉಡುಪಿ ನಗರ ಠಾಣೆಯ ಪಿಎಸ್‌ಐ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಆಟೋ ಚಾಲಕರು ಸೇರಿ ಸುರಕ್ಷಿತವಾಗಿ ಮೆಲಕ್ಕೆತ್ತಿದ ಘಟನೆ ನಗರದ ಹೊರ ವಲಯದ ಕುಕ್ಕಿಕಟ್ಟೆ ಮಾರ್ಪಳ್ಳಿಯಲ್ಲಿ ನಡೆದಿದೆ.

ವೃದ್ಧೆ ತಮ್ಮ ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದಿದ್ದು ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿಲಾಗಿದೆ. ಉಡುಪಿ ನಗರ ಠಾಣೆಯ ಪಿ.ಎಸ್.ಐ ಸದಾಶಿವ ರಾ. ಗವರೋಜಿ ತಕ್ಷಣ ಸ್ಥಳಕ್ಕಾಗಮಿಸಿದ್ದಾರೆ.

ಬಾವಿಗಿಳಿದು ಅಜ್ಜಿಯನ್ನು ರಕ್ಷಿಸುವ ಸಿದ್ದತೆಯನ್ನು ಅಗ್ನಿಶಾಮಕ ದಳದವರು ಮಾಡುತ್ತಿದ್ದಂತೆ ಎಸ್ ಐ ಸದಾಶಿವ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ಕೂಡಲೇ ಬಾವಿಗಿಳಿದು ಅಜ್ಜಿಯನ್ನು ರಕ್ಷಿಸಿದ್ದಾರೆ.

ಸದ್ಯ ವೃದ್ಧ ಮಹಿಳೆ ಆರೋಗ್ಯವಾಗಿದ್ದಾರೆ.

- Advertisement -

Latest News

error: Content is protected !!