- Advertisement -
![]()
- Advertisement -
ಉಡುಪಿ: ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಸೀದಿ ಬಳಿ ನಡೆದಿದೆ. ಮೃತಪಟ್ಟವರು ಕಿನ್ನಿಗೋಳಿಯ ರೋನಾಲ್ಡ್ ಡಿಸೋಜಾ (67) ಎಂದು ಗುರುತಿಸಲಾಗಿದೆ.
ಉಚ್ಚಿಲದಿಂದ ಕಾಪು ಕಡೆಗೆ ಸಾಗುತ್ತಿದ್ದ ಬೈಕ್ ರಸ್ತೆ ದಾಟುತ್ತಿದ್ದ ರೋನಾಲ್ಡ್ ಡಿಸೋಜಾ ಅವರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


