Wednesday, June 24, 2026
Homeಕರಾವಳಿಉಡುಪಿಉಡುಪಿ: ಲಾರಿಯನ್ನು ಅಡ್ಡಗಟ್ಟಿ ಚಾಲಕ, ನಿರ್ವಾಹಕನಿಗೆ ಹಲ್ಲೆ

ಉಡುಪಿ: ಲಾರಿಯನ್ನು ಅಡ್ಡಗಟ್ಟಿ ಚಾಲಕ, ನಿರ್ವಾಹಕನಿಗೆ ಹಲ್ಲೆ

- Advertisement -
- Advertisement -

ಉಡುಪಿ: ಲಾರಿಯನ್ನು ಅಡ್ಡಗಟ್ಟಿ ಚಾಲಕ, ನಿರ್ವಾಹಕನಿಗೆ ಹಲ್ಲೆ ಮಾಡಿರುವ ಘಟನೆ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ರಾತ್ರಿ ನಡೆದಿದೆ.

ಮುಂಬಯಿಯಿಂದ ಕೊಚ್ಚಿಗೆ ಹೋಗುತ್ತಿದ್ದ ಲಾರಿಗೆ 2 ಟೆಂಪೋ ಟ್ರಾವಲೆರ್ ವಾಹನಗಳನ್ನು ಅಡ್ಡವಿರಿಸಿ ಚಾಲಕ ಮತ್ತು ನಿರ್ವಾಹಕನಿಗೆ ಕಬ್ಬಿಣದ ರಾಡ್, ಲಿವರ್, ಸ್ಪಾನರ್‌ನಿಂದ ಹಲ್ಲೆಗೈದು ಪರಾರಿಯಾದ ಕೇರಳದ ಚಾಲಕ ಯೂನಸ್ ಪಿ.ಕೆ. ಮತ್ತು ಕ್ಲೀನರ್ ಮುಹಮ್ಮದ್ ಮದನಿ ನಜರ್ ಹಲ್ಲೆಗೊಳಗಾದರು.ಕೃತ್ಯ ಎಸಗಿದ ಬಳಿಕ ಆರೋಪಿಗಳು ವಾಹನ ಸಹಿತವಾಗಿ ಮಂಗಳೂರಿನತ್ತ ತೆರಳಿದ್ದಾರೆ.ಗಾಯಾಳುಗಳು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!