Tuesday, July 1, 2025
Homeಕರಾವಳಿಉಡುಪಿಉಡುಪಿ; ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವಕ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಹಾವು ಕಚ್ಚಿ ಸಾವು

ಉಡುಪಿ; ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವಕ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಹಾವು ಕಚ್ಚಿ ಸಾವು

spot_img
- Advertisement -
- Advertisement -

ಉಡುಪಿ: ದಸರಾ ರಜೆಯ ಹಿನ್ನೆಲೆ ಗೋವಾಕ್ಕೆ ತೆರಳಿದ್ದ ಉಡುಪಿಯ ಯುವಕನೊಬ್ಬ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಗೋವಾದಲ್ಲಿ  ನಡೆದಿದೆ. ಆದಿತ್ಯ ಶೆಟ್ಟಿ (28) ಮೃತ ಯುವಕ.


ಆದಿತ್ಯ ಶೆಟ್ಟಿ ಮೂಲತಃ ಉಡುಪಿಯವರಾಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ಅವರು, ಪಾಡಿ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಘಟನೆ ನಡೆದಿದೆ. ಯುವಕನ ಶವವನ್ನು ಹೊರತೆಗೆದಾಗ ಆದಿತ್ಯ ಕಾಲಿಗೆ ಹಾವು ಸುತ್ತಿಕೊಂಡಿರುವುದು ಕಂಡುಬಂದಿದೆ.

ನೀರಿಗೆ ಇಳಿದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಈ ಯುವಕರು ಕಳೆದ ಎರಡು ದಿನಗಳ ಹಿಂದೆ ಗೋವಾಕ್ಕೆ ಬಂದು ಕಾಣಕೋಣದ ಹೋಟೆಲ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!