Thursday, June 4, 2026
Homeಕರಾವಳಿಪುತ್ತೂರು: ಉದಯ ಸೂರ್ಯ ಎಂಟರ್ ಪ್ರೈಸಸ್ ಮಾಲಿಕ ಜಿ.ಎಸ್.ಸಲ್ಡಾನಾ ನಿಧನ..!!

ಪುತ್ತೂರು: ಉದಯ ಸೂರ್ಯ ಎಂಟರ್ ಪ್ರೈಸಸ್ ಮಾಲಿಕ ಜಿ.ಎಸ್.ಸಲ್ಡಾನಾ ನಿಧನ..!!

- Advertisement -
- Advertisement -

ಪುತ್ತೂರು: ಎಲ್ಮುಡಿಯಲ್ಲಿ ಉದಯ ಸೂರ್ಯ ಎಂಟರ್ ಪ್ರೈಸಸ್ ಮಳಿಗೆ ನಡೆಸುತ್ತಿದ್ದ 82 ವರ್ಷದ ಜಿ.ಎಸ್.ಸಲ್ಡಾನಾ ಅನಾರೋಗ್ಯದಿಂದ ಬಳಲುತ್ತಿದ್ದು ಜ.19ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಸಲ್ಡಾನಾ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ಡಿಪೋದಲ್ಲಿ ಕ್ಯಾಷಿಯರ್ ಆಗಿ ಕೆಲ ಕಾಲ ಕಾರ್ಯ ನಿರ್ವಹಿಸುತ್ತಿದ್ದರು. ತದನಂತರ ಉದ್ಯೋಗ ತ್ಯಜಿಸಿ ವ್ಯಾಪಾರ ಆರಂಭಿಸಿದ್ದರು. ಉದಯ ಸೂರ್ಯ ಎಂಟರ್ಪ್ರೈಸಸ್ ಹೆಸರಿನಲ್ಲಿ ಫ್ಯಾನ್ಸಿ ಐಟಮ್ಸ್ ರೇಡಿಯೋ ಮತ್ತು ಹೊಲಿಗೆ ಯಂತ್ರಗಳ ಮಳಿಗೆ ಹೊಂದಿದ್ದ ಇವರು ಕೆಲ ವರ್ಷಗಳ ಹಿಂದೆ ನಿವೃತ್ತರಾಗಿ ಮಂಗಳೂರಿನಲ್ಲಿ ನೆಲೆಸಿದ್ದರು.


ಮೃತರು ತಮ್ಮ ಪತ್ನಿ ಮೋನಿ ಸಲ್ಡಾನಾ ಪುತ್ರರಾದ ಜೋಸೆಫ್ ಸಲ್ಡಾನಾ, ಜಾಲಿ ಜಾನ್ ಸಲ್ಡಾನಾ, ಪುತ್ರಿ ಉದಯ್ ಸೂರ್ಯ ಜೂಡಿ, ಅಳಿಯ ಜಾನ್ ಮೋನಿಸ್, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಜ.20ರಂದು ನೀರ್ಮಾರ್ಗ ಚರ್ಚ್ ಸಿಮೆತರಿಯಲ್ಲಿ ನೆರವೇರಲಿದೆ ಎನ್ನಲಾಗಿದೆ.

- Advertisement -

Latest News

error: Content is protected !!