Wednesday, May 15, 2024
Homeಕರಾವಳಿಮಂಗಳೂರು: ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ- ದಕ್ಷಿಣ ಕನ್ನಡದಲ್ಲಿ 5 ಶಾಲೆಗಳು ಮತ್ತು...

ಮಂಗಳೂರು: ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ- ದಕ್ಷಿಣ ಕನ್ನಡದಲ್ಲಿ 5 ಶಾಲೆಗಳು ಮತ್ತು 1 ಕಾಲೇಜು ತಾತ್ಕಾಲಿಕ ಸ್ಥಗಿತ

spot_img
- Advertisement -
- Advertisement -

ಮಂಗಳೂರು: ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಲ್ಲಿ 5 ಶಾಲೆಗಳು ಮತ್ತು 1 ಕಾಲೇಜು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ದ.ಕ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರಿ ಪ್ರೌಢ ಶಾಲೆ ಬೆಂಗ್ರೆ ಕಸಬ, ಕೆನರಾ ಸಿಬಿಎಸ್‌ಇ ಡೊಂಗ್ರಕೇರಿ, ಅನ್ಸಾರ್ ಇಂಗ್ಲೀಷ್ ಮೀಡಿಯಮ್ ಹೈ ಸ್ಕೂಲ್ ಬಜ್ಪೆ, ವ್ಯಾಸ ಮಹರ್ಷಿ ಇಂಗ್ಲೀಷ್ ಮೀಡಿಯಮ್ ಹೈ ಸ್ಕೂಲ್ ಮೂಲ್ಕಿ, ವಿವೇಕಾನಂದ ಪಿಯು ಕಾಲೇಜು ಎಡಪದವು, ಸರಕಾರಿ ಪ್ರೌಢ ಶಾಲೆ ಮುಂಚೂರನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗುದು ಎಂದು ಶಿಕ್ಷಣ ಇಲಾಖೆ ಆದೇಶಿಸಿರುವುದಾಗಿ ವರದಿಯಾಗಿದೆ.

ಇನ್ನು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾದ ಹಿನ್ನಲೆ ತಾತ್ಕಾಲಿಕ ಬಂದ್ ಮಾಡುವುದಕ್ಕೆ ಜಿಲ್ಲಾಧಿಕಾರಿ ಆದೇಶಿಸಿದ್ದು, 5 ಕ್ಕಿಂತ ಹೆಚ್ಚು ಸೋಂಕು ಕಂಡು ಬಂದರೆ ಶಾಲೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

- Advertisement -
spot_img

Latest News

error: Content is protected !!