Thursday, June 4, 2026
Homeಕರಾವಳಿಮಂಗಳೂರು: ಪ್ರಧಾನಿ ಕಾರ್ಯಕ್ರಮಕ್ಕೆ ಒತ್ತಾಯ ಪೂರ್ವಕವಾಗಿ ಜನರನ್ನು ಕರೆ ತರಲಾಗುತ್ತಿದೆ: ಶಾಸಕ ಯು ಟಿ ಖಾದರ್...

ಮಂಗಳೂರು: ಪ್ರಧಾನಿ ಕಾರ್ಯಕ್ರಮಕ್ಕೆ ಒತ್ತಾಯ ಪೂರ್ವಕವಾಗಿ ಜನರನ್ನು ಕರೆ ತರಲಾಗುತ್ತಿದೆ: ಶಾಸಕ ಯು ಟಿ ಖಾದರ್ ಆರೋಪ

- Advertisement -
- Advertisement -

ಮಂಗಳೂರು: ಸೆಪ್ಟಂಬರ್ 2 ಕ್ಕೆ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಜನರನ್ನು ಬಲವಂತವಾಗಿ ಕರೆ ತರಲಾಗುತ್ತಿದೆ ಎಂದು ಮಾಜಿ ಸಚಿವ,ಶಾಸಕ ಯು.ಟಿ.ಖಾದರ್‌  ಆರೋಪಿಸಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳಿಗೆ ನೋಟಿಸ್ ಕಳುಹಿಸಲಾಗಿದೆ.‌ ಪ್ರತಿ ಗ್ರಾಮದಿಂದ 250 ಜನರನ್ನು ಕರೆತರಲು ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಆರೋಪಿಸಿದ್ದಾರೆ.

ಕಂದಾಯ ಇಲಾಖೆಯಿಂದ ವಿಎ ಸೇರಿದಂತೆ ಎಲ್ಲಾ ಅಧಿಕಾರಿಗಳು ಬರಬೇಕು ಅಂತಾ ಸೂಚನೆ ನೀಡಲಾಗಿದೆ. ಗ್ರಾಪಂ ಕಾರ್ಯದರ್ಶಿ, ಲೈನ್ ಮ್ಯಾನ್, ನೀರು ಬಿಡುವವನಿಗೂ ನೋಟಿಸ್ ಹೋಗಿದೆ.‌ ಶಾಲೆ-ಕಾಲೇಜುಗಳಿಗೆ ರಜೆ ನೀಡಿ ಎಲ್ಲಾ ಮಕ್ಕಳೂ ಕಾರ್ಯಕ್ರಮದಲ್ಲಿ ಬರಬೇಕು ಅಂತಾ ತಿಳಿಸಲಾಗಿದೆ. ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿ, ಬ್ಯಾಂಕ್ ಸವಲತ್ತು ಪಡೆದವರನ್ನು ಕರೆತರಬೇಕೆಂದು ಸೂಚಿಸಲಾಗಿದೆ ಎಂದಿದ್ದಾರೆ.

ಜಿಲ್ಲಾಧಿಕಾರಿ ಸೂಚನೆ ನೀಡಿದಾಗ ಕೆಳ ಅಧಿಕಾರಿಗಳು ಜನರನ್ನು ಕರೆತರಲೇಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಅವರ ಮನೆಯವರನ್ನಾದರೂ ಕರೆತರಬೇಕು. ಒಂದು ವಾರದಿಂದ ಎಲ್ಲಾ ಅಧಿಕಾರಿಗಳು ಬ್ಯುಸಿ ಇದ್ದಾರೆ. ಎಲ್ಲಾ ಸಿಕ್ಕ‌ಸಿಕ್ಕ ಮೀನುಗಾರರಿಗೂ ಕಿಸಾನ್ ಕಾರ್ಡ್ ನೀಡಿ ಕಾರ್ಯಕ್ರಮಕ್ಕೆ ಬರಲು ಸೂಚಿಸಿದ್ದಾರೆ. ಇಷ್ಟೆಲ್ಲಾ ಸೂಚನೆ ನೀಡಿದ ಬಳಿಕ ಜನಸಾಗರವೇ ಬರಲಿದೆ. ಜನರಿಗೆ ಯಾವುದೇ ತೊಂದರೆ ಆಗದಂತೇ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

- Advertisement -

Latest News

error: Content is protected !!