- Advertisement -
- Advertisement -
ಮಣಿಪಾಲ: ಪರ್ಕಳದ ಯುವಕನೋರ್ವ ಅರ್ಬಿಫಾಲ್ಸ್ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿಕೊಂಡಿದ್ದು, ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನಾದ ಯುವಕನನ್ನು ಆದಿತ್ಯ ಪಿ. (20) ಎನ್ನಲಾಗಿದೆ.
ಇನ್ನು ಅದೇ ದಿನ ಇನ್ನೋರ್ವ ಯುವಕ ಉತ್ತರ ಪ್ರದೇಶ ಮೂಲದ ಹರ್ಷ ಮಿಶ್ರ (20) ಎಂಬಾತನು ಮಣಿಪಾಲದ ಆರ್‌ಟಿಒ ಕಚೇರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದು, ಈತನನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಂಜಾ ಸೇವನೆ ಮಾಡಿರುವುದು ಇಬ್ಬರ ಫಾರೆನ್ಸಿಕ್ ವರದಿಯಲ್ಲಿ ದೃಢಪಟ್ಟಿದೆ.
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
- Advertisement -