Monday, June 8, 2026
Homeಕರಾವಳಿಓಮನ್ ನಲ್ಲಿ ಉಳ್ಳಾಲದ ಇಬ್ಬರು ಯುವಕರು ಸಮುದ್ರಪಾಲು!

ಓಮನ್ ನಲ್ಲಿ ಉಳ್ಳಾಲದ ಇಬ್ಬರು ಯುವಕರು ಸಮುದ್ರಪಾಲು!

- Advertisement -
- Advertisement -

ಉಳ್ಳಾಲ: ಉಳ್ಳಾಲದಿಂದ ಓಮನ್ ಗೆ ಉದ್ಯೋಗಕ್ಕೆಂದು ತೆರಳಿದ್ದ ಇಬ್ಬರು ಯುವಕರು ಕಡಲಲ್ಲಿ ಮುಳುಗಿದ್ದು, ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿರುವುದಾಗಿ ವರದಿಯಾಗಿದೆ.

ಉಳ್ಳಾಲದ ರಿಜ್ವಾನ್ ಅಲೆಕಳ , ಹಾಗೂ ಜಹೀರ್ ಮೃತಪಟ್ಟವರು. ಈ ಪೈಕಿ ಝಮೀರ್‌ರ ಮೃತದೇಹ ಪತ್ತೆಯಾಗಿದ್ದು,ರಿಝ್ವಾನ್ ಗಾಗಿ ಹುಡುಕಾಟ ಮುಂದುವರಿದಿದೆ . ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಇಲ್ಲಿನ ಕಡಲತೀರಕ್ಕೆ ಶುಕ್ರವಾರ ಸಂಜೆ ವೇಳೆ ವಿಹಾರಕ್ಕೆಂದು ತೆರಳಿದ್ದರು. ರಿಜ್ವಾನ್ ನೀರಿನಲ್ಲಿ ಮುಳುಗುತ್ತಿದ್ದಾಗ ಜಹೀರ್ ಆತನನ್ನು ಉಳಿಸಲು ಧಾವಿಸಿದ್ದರು. ಅವರನ್ನು ರಕ್ಷಿಸಲು ಸಮುದ್ರಕ್ಕಿಳಿದ ಝಮೀರ್ ಕೂಡಾ ಮುಳುಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ಜಹಿರ್ ಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದು ಕೆಲವೇ ದಿನಗಳಲ್ಲಿ ತಾಯ್ನಾಡಿಗೆ ಆಗಮಿಸುವ ತಯಾರಿಯಲ್ಲಿದ್ದರು.

- Advertisement -

Latest News

error: Content is protected !!