Friday, May 3, 2024
Homeಕರಾವಳಿಕಾಸರಗೋಡುಮಂಜೇಶ್ವರ; ಶೌಚಾಲಯದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

ಮಂಜೇಶ್ವರ; ಶೌಚಾಲಯದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

spot_img
- Advertisement -
- Advertisement -

ಮಂಜೇಶ್ವರ; ಶೌಚಾಲಯದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉಪ್ಪಳದಲ್ಲಿ ನಡೆದಿದೆ.ಉಪ್ಪಳ ದ ಅಬ್ದುಲ್ ಸಮದ್ ರವರ ಪುತ್ರ ಅಬ್ದುಲ್ ಸಹದಾದ್(2) ಮೃತ ಬಾಲಕ.

ಸಮದ್ ಅವರ ಮನೆಯ ಶೌಚಾಲಯದ ಒಂದು ಭಾಗ ಬಿರುಕು ಬಿಟ್ಟಿದ್ದು,ಬಾಲಕ ತಿಳಿಯದೆ ಇದರ ಮೇಲೆ ನಡೆದು ಕೊಂಡು ಹೋದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬಾಲಕನನ್ನು ಹೊರ ತೆಗೆದು ಉಪ್ಪಳದ ಆಸ್ಪತ್ರೆಗೆ ತಲುಪಿಸಿದ್ದಾರೆ.ಈ ವೇಳೆ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ. ಈ ಕುರಿತು ಮಂಜೇಶ್ವರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisement -
spot_img

Latest News

error: Content is protected !!