Wednesday, July 15, 2026
Homeತಾಜಾ ಸುದ್ದಿಬೆಕ್ಕು ಕಚ್ಚಿ ಮಹಿಳೆಯರಿಬ್ಬರು ಸಾವು

ಬೆಕ್ಕು ಕಚ್ಚಿ ಮಹಿಳೆಯರಿಬ್ಬರು ಸಾವು

- Advertisement -
- Advertisement -

ಆಂಧ್ರಪದೇಶ: ಬೆಕ್ಕು ಕಚ್ಚಿದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಕಮಲಾ ಹಾಗೂ ನಾಗಮಣಿ ಎಂಬ ಮಹಿಳೆಯರಿಗೆ ಎರಡು ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತು, ಇಬ್ಬರೂ ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದುಕೊಂಡಿದ್ದರು. ಇದಾದ ಬಳಿಕ ಮಾರ್ಚ್ 4 ರಂದು ಕಮಲಾ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತ ನಾಗಮಣಿ ಅವರ ಆರೋಗ್ಯದಲ್ಲೂ ಏರುಪೇರು ಉಂಟಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೇ ಇಬ್ಬರೂ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!