Sunday, June 7, 2026
Homeಇತರರಾಜ್ಯದ ಖ್ಯಾತ ಖಾಸಗಿ ಚಾನೆಲ್ ನಿರೂಪಕಿಯಬ್ಬರಿಗೆ ಕೊರೊನಾ ಪಾಸಿಟಿವ್

ರಾಜ್ಯದ ಖ್ಯಾತ ಖಾಸಗಿ ಚಾನೆಲ್ ನಿರೂಪಕಿಯಬ್ಬರಿಗೆ ಕೊರೊನಾ ಪಾಸಿಟಿವ್

- Advertisement -
- Advertisement -

ಬೆಂಗಳೂರು :  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಯಾರನ್ನು ಬಿಡಲ್ಲ ಅನ್ನೋ ರೀತಿ ಕೊರೊನಾ ಹರಡುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಇದೀಗ ಕನ್ನಡದ ಎರಡು ಖ್ಯಾತ ಸುದ್ದಿ ವಾಹಿನಿಗಳ ನಿರೂಪಕಿಯರಿಬ್ಬರಿಗೆ ಕೊರೊನಾ ಇರೋದು ದೃಢಪಟ್ಟಿದೆ. ಜೊತೆಗೆ ಕ್ಯಾಮರಾಮನ್ ಗಳಿಗಿಬ್ಬರಿಗೂ ಕೊರೊನಾ ಸೋಂಕು ತಗುಲಿದೆ.

ಮೂಲಗಳ ಮಾಹಿತಿ ಪ್ರಕಾರ ಪಬ್ಲಿಕ್ ಟಿವಿ ನಿರೂಪಕಿಯೊಬ್ಬರಿಗೆ ಹಾಗೇ ಬಿಟಿವಿ ನಿರೂಪಕಿಯೊಬ್ಬರಿಗೆ ಕೊರೊನಾ ಇರೋದು ದೃಢಪಟ್ಟಿದ್ದು, ಅವರನ್ನು ನಿಗದಿತ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸೋಂಕಿನ ಮೂಲ ಪತ್ತೆಗೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು ಅವರ ಟ್ರಾವೆಲ್ ಹಿಸ್ಟರಿ ಪಡೆದುಕೊಂಡಿದ್ದಾರೆ. ಅಲ್ಲದೇ, ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!