Monday, June 8, 2026
Homeತಾಜಾ ಸುದ್ದಿಭರ್ಜರಿ 4 ತಿಂಗಳ ಹನಿಮೂನ್ ಮುಗಿಸಿ ಭಾರತಕ್ಕೆ ಮರಳಿದ ಜೋಡಿ..

ಭರ್ಜರಿ 4 ತಿಂಗಳ ಹನಿಮೂನ್ ಮುಗಿಸಿ ಭಾರತಕ್ಕೆ ಮರಳಿದ ಜೋಡಿ..

- Advertisement -
- Advertisement -

ಮುಂಬೈ: ಹನಿಮೂನ್‌ಗೆ ಹೋದ ಜೋಡಿಯೊಂದು ಲಾಕ್ ‌ಡೌನ್‌ನಿಂದಾಗಿ ಮೂರು ತಿಂಗಳಾದರೂ ವಾಪಸಾಗದೇ ಹೋದಲ್ಲಿಯೇ ಇದ್ದು, ಅಂತೂ ಇದೀಗ ವಾಪಸ್ ಭಾರತಕ್ಕೆ ಕಾಲಿಟ್ಟಿದ್ದಾರೆ. ಭರ್ಜರಿ 105 ದಿನಗಳ ಹನಿಮೂನ್ ಮಾಡಿಕೊಳ್ಳುವ ಮೂಲಕ ಈ ಜೋಡಿ ಸದ್ಯ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.

ಹೌದು, ರೋಹನ್ ಮತ್ತು ರಿಯಾ ಮಾರ್ಚ್‌ನಲ್ಲಿ ಮದುವೆಯಾಗಿದ್ದರು. ಲಾಕ್ ‌ಡೌನ್‌ಕ್ಕಿಂತ ಮುಂಚೆ ಹನಿಮೂನ್‌ಗೆಂದು ಮಾಲ್ಡೀವ್ಸ್‌ ಗೆ‌ ಹೋಗಿದ್ದ ಈ ಜೋಡಿಗೆ ಶಾಕ್ ಆಗಿದ್ದಂತೂ ನಿಜ. ಏಕೆಂದರೆ ಭಾರತದಲ್ಲಿ ಲಾಕ್‌ಡೌನ್ ಪ್ರಕ್ರಿಯೆ ಆರಂಭವಾದ ನಂತರ ಯಾವುದೇ ವಿಮಾನ ಹಾರಾಟವಿರಲಿಲ್ಲ. ಅಲ್ಲಿಂದ ಮರಳಬೇಕು ಅನ್ನುವಷ್ಟರಲ್ಲಿ ಭಾರತದಲ್ಲಿ ಕೊರೋನಾ ಲಾಕ್‌ಡೌನ್ ಆರಂಭವಾಯಿತು. ಹಾಗಾಗಿ ಹೋದ ಜಾಗದಲ್ಲಿಯೇ ಉಳಿಯಬೇಕಿತ್ತು. ಆದರೆ ಇದೀಗ ಇದ್ದ ಜಾಗದಿಂದ ವಾಪಸ್ ಭಾರತಕ್ಕೆ ಮರಳಿದ್ದಾರೆ.

ಇನ್ನು ಲಾಕ್‌ಡೌನ್ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಅದರಲ್ಲೂ ವಿಶೇಷ ವಿಮಾನದಲ್ಲಿ ಆಗಮಿಸಲು ಭಾರತೀಯ ಮೂಲದವರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಂಪತಿ ಮುಂಬೈಗೆ ಆಗಮಿಸಿದ್ದಾರೆ. ಹೊರ ದೇಶದಿಂದ ಬಂದ ಕಾರಣ ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್ ಒಳಪಡಬೇಕಾಗುತ್ತದೆ. ಹಾಗಾಗಿ ಈ ಜೋಡಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದು ನಂತರ ಮತ್ತೆ ದುಬೈಗೆ ತೆರಳಲಿದ್ದಾರೆ.

- Advertisement -

Latest News

error: Content is protected !!