Friday, June 5, 2026
Homeತಾಜಾ ಸುದ್ದಿತರಬೇತಿ ವಿಮಾನ ಪತನ: ಮಹಿಳಾ ಪೈಲಟ್ ಸೇರಿ ಇಬ್ಬರ ದುರ್ಮರಣ

ತರಬೇತಿ ವಿಮಾನ ಪತನ: ಮಹಿಳಾ ಪೈಲಟ್ ಸೇರಿ ಇಬ್ಬರ ದುರ್ಮರಣ

- Advertisement -
- Advertisement -

ಧೆಂಕನಾಲ್: ಒಡಿಶಾದಲ್ಲಿ ಇಂದು ಬೆಳಿಗ್ಗೆ ತರಬೇತಿ ವಿಮಾನ ಪತನವಾಗಿದ್ದು, ಬಿಹಾರ ಮತ್ತು ತಮಿಳುನಾಡು ಮೂಲದ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ.

ತರಬೇತಿ ಲಘು ವಿಮಾನದಲ್ಲಿ ಮಹಿಳಾ ಪೈಲಟ್ ಹಾಗೂ ಮಾರ್ಗದರ್ಶಕರೊಬ್ಬರು ಮಾತ್ರ ಇದ್ದರು ಎಂದು ತಿಳಿದು ಬಂದಿದೆ.

ತರಬೇತಿ ಕೇಂದ್ರದಿಂದ ಟೇಕಾಫ್ ಆದ ಕೆಲ ಕ್ಷಣದಲ್ಲೇ ನಿಯಂತ್ರಣ ತಪ್ಪಿದ ಏರ್ ಕ್ರಾಫ್ಟ್ ಗಿರಕಿ ಹೊಡೆಯುತ್ತಾ ನೆಲಕ್ಕುರುಳಿದೆ. ತರಬೇತಿ ಸಂದರ್ಭ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ಪತನವಾಗಿದೆ ಎನ್ನಲಾಗಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!