Friday, June 5, 2026
Homeತಾಜಾ ಸುದ್ದಿರಸ್ತೆ ಅಪಘಾತ: ಬೈಕ್ ನಲ್ಲಿ ಸಂಚರಿಸುತ್ತಿದ್ದ ಮಾಜಿ ಶಾಸಕ ಸೇರಿ ಇಬ್ಬರ ಸಾವು

ರಸ್ತೆ ಅಪಘಾತ: ಬೈಕ್ ನಲ್ಲಿ ಸಂಚರಿಸುತ್ತಿದ್ದ ಮಾಜಿ ಶಾಸಕ ಸೇರಿ ಇಬ್ಬರ ಸಾವು

- Advertisement -
- Advertisement -

ಶಿವಗಂಗಾ: ಮಧುರೈ- ಶಿವಗಂಗಾ ರಾಷ್ಟ್ರೀಯ ಹೆದ್ದಾರಿಯ ಪದಮಥುರ್ ಬಳಿ ಸರಕು ತುಂಬಿದ್ದ ಟ್ರಕ್ ಗೆ ಮೋಟರ್ ಸೈಕಲ್ ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಡಿಎಂಕೆ ಮಾಜಿ ಶಾಸಕ ಮೃತಪಟ್ಟಿದ್ದಾರೆ.

ಬಿ ಮನೋಹರನ್ (66) ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಮೋಟರ್ ಸೈಕಲ್ ಅನ್ನು ಎಂ ಸೈಫುದ್ದೀನ್ ಓಡಿಸುತ್ತಿದ್ದು, ಮನೋಹರನ್ ಹಿಂಬದಿ ಸವಾರರಾಗಿದ್ದರು. ತೀವ್ರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಮಧುರೈ ಕಡೆಗೆ ಸಾಗುತ್ತಿದ್ದರು ಎಂದು ಹೇಳಲಾಗಿದೆ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಇಬ್ಬರೂ ಮದುರೈಗೆ ತೆರಳುತ್ತಿದ್ದರು. ಅವರ ಮೃತದೇಹಗಳನ್ನು ಶಿವಗಂಗೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಮನೋಹರನ್ ಅವರು 1989ರಲ್ಲಿ ಶಿವಗಂಗಾ ವಿಧಾನಸಭೆ ಕ್ಷೇತ್ರದಿಂದ ಡಿಎಂಕೆಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಪೂವಂತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!