Saturday, May 18, 2024
Homeತಾಜಾ ಸುದ್ದಿನಟಿ ಕಂಗನಾ ರಣಾವತ್​ ವಿರುದ್ಧ ಕರ್ನಾಟಕದಲ್ಲಿ ಎಫ್ಐಆರ್ ದಾಖಲು

ನಟಿ ಕಂಗನಾ ರಣಾವತ್​ ವಿರುದ್ಧ ಕರ್ನಾಟಕದಲ್ಲಿ ಎಫ್ಐಆರ್ ದಾಖಲು

spot_img
- Advertisement -
- Advertisement -

ತುಮಕೂರು: ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ ಟ್ವಿಟರ್​​ನಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿರುವ ಆರೋಪ ಹೊತ್ತ ಬಾಲಿವುಡ್​​ ನಟಿ ಕಂಗನಾ ರಣಾವತ್ ವಿರುದ್ಧ ನಗರದ ಕ್ಯಾತಸಂದ್ರ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.

ಗುಂಪುಗಳ ನಡುವೆ ದ್ವೇಷವನ್ನ ಉತ್ತೇಜಿಸುವುದು, ಉದ್ದೇಶಪೂರ್ವಕವಾಗಿ ಅವಮಾನ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ತುಮಕೂರು ಜಿಲ್ಲಾ ನ್ಯಾಯಾಲಯ ಸೂಚನೆ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಕೀಲ ಎಲ್.​ ರಮೇಶ್​ ನಾಯಕ್​ ನೀಡಿದ ದೂರಿನ ಆಧಾರದ ಮೇಲೆ ಕಂಗನಾ ವಿರುದ್ಧ ಪ್ರಕರಣ ದಾಖಲಿಸುವಂತೆ ಜೆಎಂಎಫ್​ಸಿ ನ್ಯಾಯಾಲಯ ಕ್ಯಾತಸಂದ್ರ ಪೊಲೀಸ್​ ಠಾಣೆ ಪೊಲೀಸರಿಗೆ ಸೂಚನೆ ನೀಡಿದೆ.

ಸೆಪ್ಟೆಂಬರ್​​ 21ರಂದು ಕಂಗನಾ ತಮ್ಮ ಟ್ವಿಟರ್​​ ಖಾತೆಯಲ್ಲಿ ಕೃಷಿ ಮಸೂದೆ ಪ್ರತಿಭಟನೆ ವಿರೋಧವಾಗಿ ಟ್ವೀಟ್​ ಮಾಡಿದ್ದರು. ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನ ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗೆ ಕರ್ನಾಟಕ, ಪಂಜಾಬ್​, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಕಂಗನಾ ಟ್ವೀಟ್ ಮಾಡಿದ್ದರು.

- Advertisement -
spot_img

Latest News

error: Content is protected !!