Saturday, April 20, 2024
Homeತಾಜಾ ಸುದ್ದಿತುಮಕೂರಿನಲ್ಲೊಂದು ಅಪರೂಪದ  ಪ್ರಸಂಗ: ಪರಸ್ಪರ ಪ್ರೀತಿಸಿ ಮದುವೆಯಾಗಲು ಪೊಲೀಸರ ಅನುಮತಿ ಕೇಳಿದ ಯುವತಿಯರು

ತುಮಕೂರಿನಲ್ಲೊಂದು ಅಪರೂಪದ  ಪ್ರಸಂಗ: ಪರಸ್ಪರ ಪ್ರೀತಿಸಿ ಮದುವೆಯಾಗಲು ಪೊಲೀಸರ ಅನುಮತಿ ಕೇಳಿದ ಯುವತಿಯರು

spot_img
- Advertisement -
- Advertisement -

ತುಮಕೂರು: ಇಲ್ಲಿನ  ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯರಿಬ್ಬರು ತಾವು ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಿರ್ಧರಿಸಿದ್ದೇವೆ ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮದುವೆ ಮಾಡಿಕೊಳ್ಳಲು ಮನೆ ಬಿಟ್ಟು ಹೊರಬಂದವರು ಈಗ ಪೊಲೀಸರ ನೆರವು ಕೋರಿದ್ದಾರೆ. ಈ ಇಬ್ಬರು ಯುವತಿಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಇಬ್ಬರೂ ತುಮಕೂರಿನಲ್ಲೇ ವಾಸಿಸುತ್ತಿದ್ದರು. ಕೆಲದಿನಗಳ ಮಟ್ಟಿಗೆ ಕಾಣೆಯಾಗಿದ್ದ ಯುವತಿಯರು ಬಳಿಕ ತುಮಕೂರಿಗೆ ಆಗಮಿಸಿ ಮದುವೆಯಾಗುವುದಾಗಿ ತೀರ್ಮಾನಿಸಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಆದರೆ ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆ ಯುವತಿಯರು ಬೆದರಿಕೆ ಹಾಕಿದ್ದಾರೆ. ಆದರೆ ಒಬ್ಬಾಕೆಯ ಪೋಷಕರು ಸಮ್ಮತಿಸಿದರೆ ಮತ್ತೊಬ್ಬಾಕೆಯ ಪೋಷಕರು ವಿರೋಧಿಸಿ ಯುವತಿಯನ್ನು ಕರೆದೊಯ್ದಿದ್ದಾರೆ.

ಕಾಲೇಜಿನಲ್ಲಿದ್ದಾಗ ಇಬ್ಬರ ನಡುವೆ ಗೆಳತನವಾಗಿತು. ನಂತರ ಪ್ರೀತಿ ಅಂಕುರಿಸಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ಆದರೆ, ಇವರಿಬ್ಬರ ವಿಚಿತ್ರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಇವರ ಬಯಕೆ ಈಡೇರಿಲಿಲ್ಲ, ಹೀಗಾಗಿ ಅವರು ತುಮಕೂರು ಬಿಟ್ಟು ಹೋಗಿದ್ದರು. ನಂತರ ವಾಪಸ್ ಬಂದು ಪೊಲೀಸ್ ಠಾಣೆಗೆ ಬಂದು ನಮ್ಮಬ್ಬಿರ ಮದುವೆ ಮಾಡಿಸಿಕೊಡಿ ಎಂದು ಮೊರೆ ಹೋಗಿದ್ದು, ನಂತರ ಇದಕ್ಕೆ ಪೊಲೀಸರು ಅವಕಾಶ ನೀಡಿಲ್ಲ  ಎನ್ನಲಾಗಿದೆ.

- Advertisement -
spot_img

Latest News

error: Content is protected !!