Thursday, June 4, 2026
Homeಕರಾವಳಿಸುರತ್ಕಲ್ ನಲ್ಲಿ ಒಂದೇ ಕುಟುಂಬದ ಇಬ್ಬರು ಸಮುದ್ರಪಾಲು

ಸುರತ್ಕಲ್ ನಲ್ಲಿ ಒಂದೇ ಕುಟುಂಬದ ಇಬ್ಬರು ಸಮುದ್ರಪಾಲು

- Advertisement -
- Advertisement -

ಮಂಗಳೂರು: ಒಂದೇ ಕುಟುಂಬದ ಇಬ್ಬರು ನೀರುಪಾಲಾಗಿರುವ ಘಟನೆ ಸುರತ್ಕಲ್ ಎನ್‌ಐಟಿಕೆ ಬೀಚ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮಂಗಳೂರು ಶಕ್ತಿನಗರ ನಿವಾಸಿಗಳಾದ ವೈಷ್ಣವಿ(21) ಮತ್ತು ತ್ರಿಶಾ(13) ಎಂದು ಗುರುತಿಸಲಾಗಿದೆ. ಇವರಿಬ್ಬರು ಸೋದರ ಸಂಬಂಧಿ ಎಂದು ತಿಳಿದುಬಂದಿದೆ.

ಇವರು ಇತ್ತೀಚೆಗೆ ಮೃತಪಟ್ಟ ತಮ್ಮ ಮಾವನ ತಿಥಿಯ ಪಿಂಡ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಇಂದು ಬೆಳಗ್ಗೆ ಕುಟುಂಬಸ್ಥರ ಜೊತೆಗೆ ಎನ್‌ಐಟಿಕೆ ಬೀಚ್ ಗೆ ಆಗಮಿಸಿದ್ದರು. ಇದೇ ಸಂಧರ್ಭ ವೆಂಕಟೇಶ್ ಎಂಬವರು ವೈಷ್ಣವಿ ಮತ್ತು ತ್ರಿಶಾ ಜೊತೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿದ ಮೂವರನ್ನು ಸ್ಥಳೀಯ ಈಜುಗಾರರು ಮತ್ತು ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಹೋಂ ಗಾರ್ಡ್ ಪ್ರಶಾಂತ್ ಮೇಲೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ವೈಷ್ಣವಿ ಮತ್ತು ತ್ರಿಶಾ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!