Thursday, June 4, 2026
Homeಕರಾವಳಿಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ವಶಕ್ಕೆ: ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ವಶಕ್ಕೆ: ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

- Advertisement -
- Advertisement -

ಶಿವಮೊಗ್ಗ: ಮಂಗಳೂರು ಕುಕ್ಕರ್ ಸ್ಫೋಟ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ‌ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು, ಬ್ಲಾಸ್ಟ್ ವೇಳೆ ಶಾರೀಕ್ ಗಾಯಗೊಂಡಿದ್ದು, ದೇಹ ಶೇಕಡಾ 45 ರಷ್ಟು ಬರ್ನ್ ಆಗಿದೆ, ಉಸಿರಾಟ ಕಷ್ಟ ಆಗಿದ್ದು, ಗಂಟಲಿಗೆ ಪೈಪ್ ಹಾಕಿರುವ ಕಾರಣ ಆತ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

ಇನ್ನೂ ಮೂರು ನಾಲ್ಕು ದಿನಗಳ ಶಾರೀಕ್ ಮಾತನಾಡಲು ಅಗಲ್ಲ‌, ಆದರೆ ಜೀವಕ್ಕೆ ಅಪಾಯ ಇಲ್ಲ ಎಂದು ಹೇಳಿರುವ ‌ಆರಗ ಜ್ಞಾನೇಂದ್ರ,
ಉತ್ತಮ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದು, ಆಸ್ಪತ್ರೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಭಯೋತ್ಪಾದಕ ಚಟುವಟಿಕೆಯ ಮೂಲವನ್ನು ಅಮೂಲಾಗ್ರ ತನಿಖೆ ಮೂಲಕ ಕೆದಕಲಾಗುತ್ತಿದೆ ಎಂದೂ ಗೃಹ ಸಚಿವರು ತಿಳಿಸಿದ್ದಾರೆ.

- Advertisement -

Latest News

error: Content is protected !!