Thursday, June 4, 2026
Homeಕರಾವಳಿಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ಬೆನ್ನಲ್ಲೇ ಇಂದು ಮತ್ತೊಂದು ಆತಂಕ ಎದುರಾಗಿತ್ತು. ಇಂದು ಬಿಜೈನಲ್ಲಿರುವ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್‍ವೊಂದು ಪತ್ತೆಯಾಗಿದೆ. ಇದ್ರಿಂದ ಕೆಲಕಾಲ ಬಸ್‌ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಾರಸುದಾರರಿಲ್ಲದ ಬ್ಯಾಗ್‌ ನೋಡುತ್ತಿದ್ದಂತೆ ಸ್ಥಳೀಯರು ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  

ತಕ್ಷಣ ಸ್ಥಳಕ್ಕೆ ಬಂದ ಬಾಂಬ್ ಸ್ಕ್ವಾಡ್, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ. ಆದ್ರೆ ಬ್ಯಾಗ್‌ನಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ನಂತರ ಬ್ಯಾಗ್‌ನ ವಾರಸುದಾರರು ಪತ್ತೆಯಾಗಿದ್ದು, ಬಸ್ ಪ್ರಯಾಣಿಕರೊಬ್ಬರು ನಿಲ್ದಾಣದಲ್ಲಿ ಇಟ್ಟು ಹೋಗಿದ್ದರು ಎಂದು ತಿಳಿದಿದೆ.

- Advertisement -

Latest News

error: Content is protected !!