Thursday, June 4, 2026
Homeಕರಾವಳಿಮಂಗಳೂರುಮಾಜಿ ಶಾಸಕ ಮೊಯ್ದೀನ್‌ ಬಾವಾ ಸಹೋದರ ಮಮ್ತಾಜ್ ಅಲಿ ನಾಪತ್ತೆ ಪ್ರಕರಣ; ಮಹಿಳೆ ಸಹಿತ ಆರು...

ಮಾಜಿ ಶಾಸಕ ಮೊಯ್ದೀನ್‌ ಬಾವಾ ಸಹೋದರ ಮಮ್ತಾಜ್ ಅಲಿ ನಾಪತ್ತೆ ಪ್ರಕರಣ; ಮಹಿಳೆ ಸಹಿತ ಆರು ಜನರ ವಿರುದ್ದ ಎಫ್‌ಐಆರ್

- Advertisement -
- Advertisement -

ಮಂಗಳೂರು: ಮಾಜಿ ಶಾಸಕ ಮೊಯ್ದೀನ್‌ ಬಾವಾ ಸಹೋದರ ಮಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆ ಸಹಿತ ಆರು ಮಂದಿಯ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಮಹಿಳೆ ಜತೆ ಅಲಿಯವರಿಗೆ ಅಕ್ರಮ ಸಂಬಂಧವಿತ್ತೆಂದು ಅಪಪ್ರಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಡಿ ಆರು ಜನರ ವಿರುದ್ದ ದೂರು ದಾಖಲು ಮಾಡಲಾಗಿದೆ. ರೆಹಮತ್ ಎಂಬ ಮಹಿಳೆ ಮತ್ತು ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಹೆಬ್, ಸೀರಜ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮಮ್ತಾಜ್‌ ಅಲಿ ಅವರಿಗೆ ಅಕ್ರಮ ಸಂಬಂಧ ಇತ್ತು ಎಂದು ಅಪಪ್ರಚಾರ ಮಾಡಿ ಈ ಆರೋಪಿಗಳು ಈಗಾಗಲೇ 50 ಲಕ್ಷ ರೂ ಪಡೆದುಕೊಂಡಿದ್ದರು. ಅಲ್ಲದೆ ಇದೀಗ ಮತ್ತೆ 50 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳು ಅಪಪ್ರಚಾರ, ಬ್ಲ್ಯಾಕ್ ಮೇಲ್ ಮೂಲಕ ಮಮ್ತಾಜ್ ಅಲಿಯವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರೆಂದು ಅಲಿ ಸಹೋದರನ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ.

Add New Post

- Advertisement -

Latest News

error: Content is protected !!