- Advertisement -
- Advertisement -
ಮಂಗಳೂರು: ಭಾನುವಾರ ಮುಂಜಾನೆಯಿಂದ ಕೂಳೂರು ಸೇತುವೆಯ ಬಳಿಯಿಂದ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರ ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್‌ಮನ್ ಮಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ.
ಭಾನುವಾರ ಮುಂಜಾನೆ ಮುಮ್ತಾಜ್ ಅಲಿ ಅವರ ತಮ್ಮ ಹೊಸ BMW ಕಾರನ್ನು ಬಸ್ಸಿಗೆ ಗುದ್ದಿಸಿ ಬಳಿಕ ಕೂಳೂರು ಸೇತುವೆ ಬಳಿ ಕೀ ಸಮೇತ ಇಟ್ಟು ನದಿಗೆ ಹಾರಿದ್ದ ಶಂಕೆ ವ್ಯಕ್ತವಾಗಿತ್ತು. ನಿನ್ನೆಯಿಂದ ಮುಳುಗುತಜ್ಞ ಈಶ್ವರ ಮಲ್ಪೆ ಸಹಿತ 7 ಸ್ಕೂಬಾ ಡೈವರ್‌ಗಳು , ಎನ್‌ಡಿಆರ್‌ಎಫ್ ತಂಡ ಕೂಡ ಶೋಧಕಾರ್ಯ ನಡೆಸುತ್ತಿತ್ತು. ಇಂದು ಅವರ ಮೃತದೇಹ ಪತ್ತೆಯಾಗಿದೆ.
ಈಗಗಾಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಮಹಿಳೆ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
- Advertisement -