Wednesday, June 24, 2026
Homeತಾಜಾ ಸುದ್ದಿಪತ್ನಿ‌ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಕ್ಕೆ ಯುವಕ ಆತ್ಮಹತ್ಯೆ

ಪತ್ನಿ‌ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಕ್ಕೆ ಯುವಕ ಆತ್ಮಹತ್ಯೆ

- Advertisement -
- Advertisement -

ಸೂರತ್‌:  ಪತ್ನಿ‌ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ
ಸೂರತ್ ನಲ್ಲಿನಡೆದಿದೆ. ಆ‌ ಮೂಲಕ ಜೂನ್ ನಲ್ಲಿ ನಡೆದ ಯುವಕನೋರ್ವನ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ಅದರಂತೆ ಯುವಕನ ಪತ್ನಿ ಮತ್ತು ಮೈದುನನ ವಿರುದ್ಧ ಸೂರತ್ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಿದ್ದಾರೆ.

ಆತನ ಪತ್ನಿ ಮತ್ತು ಮೈದುನ ಗೋಮಾಂಸವನ್ನು ಒತ್ತಾಯ ಮಾಡಿಸಿ ತಿನ್ನಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈತ ಆತ್ಮಹತ್ಯೆ ಮುನ್ನ ಫೇಸ್ ಬುಕ್ ನಲ್ಲಿ ಸೂಸೈಡ್ ನೋಟ್ ಅಪ್ ಲೋಡ್ ಮಾಡಿದ್ದಾನೆ.ಅವರು ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ನಂತರ ಫೇಸ್ ಬುಕ್ ಪೋಸ್ಟ್ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ರೋಹಿತ್ ಮುಸ್ಲಿಂ ಯುವತಿ ಸೋನಂ ಎಂಬಾಕೆಯನ್ನು ಮದುವೆಯಾಗಿದ್ದ.ಆ ಬಳಿಕ ಆತ ಅತ್ಮಹತ್ಯೆ ಮಾಡಿಕೊಂಡಿದ್ದ.ಇದೀಗ ಘಟನೆ ನಡೆದು ಎರಡು ತಿಂಗಳ‌ ಬಳಿಕ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ.

ರೋಹಿತ್ ಪತ್ನಿ ಸೋನಂ ಮತ್ತು ಆಕೆಯ ಸಹೋದರ ಮುಖ್ತಾರ್​​​​ ಸೇರಿಕೊಂಡು ರೋಹಿತ್​​ಗೆ ಗೋಮಾಂಸ ತಿನ್ನಿಸಿರುವ ಕಾರಣ ಮನನೊಂದು ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಎಂದು ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!