Friday, June 26, 2026
Homeಕರಾವಳಿಕಡಬ; ಕಾಣಿಯೂರಿನಲ್ಲಿ ಬೆಡ್ ಶೀಟ್ ವ್ಯಾಪಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್;  ಹಲ್ಲೆ ಮಾಡುವ ವಿಡಿಯೋ...

ಕಡಬ; ಕಾಣಿಯೂರಿನಲ್ಲಿ ಬೆಡ್ ಶೀಟ್ ವ್ಯಾಪಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್;  ಹಲ್ಲೆ ಮಾಡುವ ವಿಡಿಯೋ ವೈರಲ್

- Advertisement -
- Advertisement -

ಕಡಬ; ಕಾಣಿಯೂರಿನಲ್ಲಿ ಬೆಡ್ ಶೀಟ್ ವ್ಯಾಪಾರಿಗಳ ಮೇಲೆ  ಹಲ್ಲೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ನಿನ್ನೆ ಸರಕಳ್ಳತನಕ್ಕೆ ಯತ್ನ, ಮಾನಭಂಗಕ್ಕೆ ಯತ್ನ ಎಂದೆಲ್ಲ ಸುದ್ದಿಯಾಗಿದ್ದ ವಿಚಾರ ಇದೀಗ ಟ್ವಿಸ್ಟ್ ಪಡೆದುಕೊಂಡಿದೆ. ಈ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಹಲ್ಲೆ ಮಾಡುವ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗಿದೆ.

ಇನ್ನು ಈ ಬಗ್ಗೆ ಹಲ್ಲೆಗೊಳಗಾದ  ಯುವಕ ರಫೀಕ್ ಪ್ರತಿಕ್ರಿಯಿಸಿದ್ದು, ನಾವು ಬೆಡ್ ಶೀಟ್ ವ್ಯಾಪಾರಿಗಳು, ನಾವು ಒಂದು ಮನೆಗೆ ಹೋಗಿ ಅಲ್ಲಿದ್ದ ಅಮ್ಮನ ಬಳಿ ಬೆಡ್ ಶೀಟ್ ಬೇಕಾ‌ ಎಂದು ಕೇಳಿದೆವು. ಅವರು ಬೇಡ ಎಂದರು, ನಾವು ಕಡಿಮೆ ಕೊಡುತ್ತೇವೆ ಎಂದು ಹೇಳಿದೆವು, 10 ನಿಮಿಷ ನಾವು ಮಾತನಾಡಿದೆವು.  ಅವರಲ್ಲಿ, ಬೆಡ್ ಶಿಟ್ ತೆಗೆದುಕೊಳ್ಳುವಂತೆ ಹೇಳಿದೆವು.‌ ಈ ವೇಳೆ ಅವರು ಫೋನ್ ಮಾಡುತ್ತಿದ್ದರು.. ನಾವು ಅವರಿಗೆ ಬೆಡ್ ಶೀಟ್ ಬೇಡ ಎಂದು ಬಂದೆವು. ಮುಂದಕ್ಕೆ ಬರುವಾಗ ಕಾಣಿಯೂರು ಬಳಿ ಪಿಕಪ್ ಅಡ್ಡ ಇಟ್ಟು ನಮ್ಮ ವಾಹನ‌ ತಡೆಯಲಾಯಿತು. ಬ್ಯಾರಿಗಳು ಯಾಕೆ ಬಂದದ್ದು ಎಂದು ಹೊಡೆದ್ರು, ಇಲ್ಲಿ ಊರು ಗೊತ್ತಿಲ್ವ ಯಾವ ಊರು ಎಂದು ಹೊಡೆದ್ರು. ಬೈಕ್ ನನ್ನ ಕಾಲ‌ ಮೇಲೆ ಹತ್ತಿಸಿದ್ರು, ನಮಗೆ ಹಿಗ್ಗಾ ಮುಗ್ಗಾ ಥಳಿಸಿದ್ರು ಎಂದು ಹೇಳಿದ್ದಾರೆ. ಚಾಕುವಿನಲ್ಲಿ ಉಲ್ಟಾ ಮಾಡಿ ಹೊಡೆದ್ರು, ನಮ್ಮ ಮೇಲೆ ಸುಳ್ಳು ಕೇಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಹಲ್ಲೆಗೊಳಗಾದ ರಮೀಝ್ ಮಾತನಾಡಿ, ಬೆಡ್ ಶೀಟ್ ಮಾರಾಟಕ್ಕೆ ಹೋದಾಗ ‌ನಮಗೆ ಮತ್ತು ವಾಹನಕ್ಕೆ ಹೊಡೆದಿದ್ದಾರೆ‌‌. ನಮ್ಮಲ್ಲಿದ್ದ 25000 ದ ಬೆಡ್ ಶೀಟ್ ಅವರು ಹಾಳು ಮಾಡಿದ್ದಾರೆ. ಗಾಡಿಗೆ ಮತ್ತು ನಮಗೆ ಕಲ್ಲು ಹಾಕಿದ್ರು. ನಮಗೆ ಪ್ರಜ್ಞೆ ತಪ್ಪಿತ್ತು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!