Thursday, June 4, 2026
Homeಕರಾವಳಿಮಂಗಳೂರು; ಮದುವೆಯಾದ 6 ತಿಂಗಳಿಗೆ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ, ತ್ರಿವಳಿ ತಲಾಖ್ ನೀಡಿದ ಪಾಪಿ...

ಮಂಗಳೂರು; ಮದುವೆಯಾದ 6 ತಿಂಗಳಿಗೆ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ, ತ್ರಿವಳಿ ತಲಾಖ್ ನೀಡಿದ ಪಾಪಿ ಪತಿ

- Advertisement -
- Advertisement -

ಮಂಗಳೂರು; ಮದುವೆಯಾದ 6 ತಿಂಗಳಿಗೆ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ, ಪಾಪಿ ಪತಿಯೊಬ್ಬ ತ್ರಿವಳಿ ತಲಾಕ್ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ತರಕಾರಿ ವ್ಯಾಪಾರಿಯಾಗಿದ್ದ ಮಾರ್ನಮಿ ಕಟ್ಟೆಯ ಮಹಮ್ಮದ್ ಹುಸೇನ್ 6 ತಿಂಗಳ ಹಿಂದೆ ​ ಶಬಾನಾ ಎಂಬವರನ್ನು ಎರಡನೇ ಮದುವೆಯಾಗಿದ್ದ. ಮೊದಲ ಮದುವೆಯಿಂದ 2 ಮಕ್ಕಳನ್ನು ಹೊಂದಿದ್ದ ಹುಸೇನ್​  ಹಣ ಪೀಕಿಸಿ ಬಳಿಕ ತಲಾಖ್​ ನೀಡಿದ್ದ. ನಂತರ ಶಬಾನಾ ಅವರನ್ನ ಮದುವೆಯಾಗಿ 8 ದಿನದಲ್ಲಿ ಪತ್ನಿಯಿಂದ ಹಣ ಒಡವೆ ಸೇರಿ 10 ಲಕ್ಷ ರೂಪಾಯಿ ಎಗರಿಸಿದ್ದ.

ಇನ್ನು ಪತ್ನಿ ಗರ್ಭಿಣಿಯಾದ ಬಳಿಕ ಒತ್ತಾಯ ಪೂರ್ವಕವಾಗಿ ಮಾತ್ರೆ ತಿನ್ನಿಸಿ ಅಬಾರ್ಷನ್ ಮಾಡಿಸಿದ್ದಾನಂತೆ ಈ ಪಾಪಿ. ಇದೀಗ ಹಣಕ್ಕಾಗಿ ಪೀಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿ, ತಲಾಖ್​ ನೀಡಿದ್ದಾನೆ. ಈ ಹಿಂದೆ ಇದ್ದ ಪತ್ನಿಗೂ ಕೂಡ ಹಣಕ್ಕಾಗಿ ಪೀಡಿಸಿ ಕೊನೆಗೆ ಹುಸೇನ್ ತಲಾಖ್ ನೀಡಿದ್ದ. ಇದೀಗ ಎರಡನೇ ಪತ್ನಿ ಶಬಾನಾಗೂ ತಲಾಖ್ ನೀಡಿ ಎರಡು ಮಕ್ಕಳೊಂದಿಗೆ ಅವರನ್ನು ಮನೆಯಿಂದ ಹೊರದಬ್ಬಿದ್ದಾನೆ. ನೊಂದ ಮಹಿಳೆ ನನಗೆ ನ್ಯಾಯ ಕೊಡಿಸಿ, ಇಂತಹ ಪರಿಸ್ಥಿತಿ ಮತ್ಯಾರಿಗೂ ಬರಬಾರದೆಂದು ಅಳಲು ತೋಡಿಕೊಳ್ಳುತ್ತಾ ಪಾಂಡೇಶ್ವರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!