Thursday, June 4, 2026
Homeಕರಾವಳಿಉಡುಪಿಮಲ್ಪೆ: ಮೊಬೈಲ್ ವಿಚಾರವಾಗಿ ಗಲಾಟೆ, ಚಾಕುವಿನಿಂದ ಇರಿದು ಕೊಲೆಗೆ ಯತ್ನ

ಮಲ್ಪೆ: ಮೊಬೈಲ್ ವಿಚಾರವಾಗಿ ಗಲಾಟೆ, ಚಾಕುವಿನಿಂದ ಇರಿದು ಕೊಲೆಗೆ ಯತ್ನ

- Advertisement -
- Advertisement -

ಮಲ್ಪೆ: ಮೊಬೈಲ್ ವಿಚಾರದಲ್ಲಿ ಗಲಾಟೆ ತೆಗೆದು ಮಲ್ಪೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕಾರ್ಮಿಕನಿಗೆ ಆತನ ಸಹ ಕಾರ್ಮಿಕ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ .

ಒರಿಸ್ಸಾ ಮೂಲದ ಅಧಿಕಾಂತ ಮಲ್ಲಿಕ್ ಹಾಗೂ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಮಲ್ಲಿಕ್ ಇವರಿಬ್ಬರ ನಡುವೆ ಮೊಬೈಲ್ ವಿಚಾರವಾಗಿ ಯಾವತ್ತೂ ಗಲಾಟೆ ನಡೆಯುತಿತ್ತು.

ನಿನ್ನೆ ರಾತ್ರಿ ಮತ್ತೆ ಅರುಣ್ ಮಲ್ಲಿಕ್ ಅಧಿಕಾಂತ ಮಲ್ಲಿಕ್ ಅವರೊಂದಿಗೆ ಮೊಬೈಲ್ ವಿಚಾರದಲ್ಲಿ ಗಲಾಟೆ ಮಾಡಿ ಅಧಿಕಾಂತ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ಈ ವೇಳೆ ಅಧಿಕಾಂತ ಅವರು ತಪ್ಪಿಸಿಕೊಂಡು ಓಡಿ ಹೋಗಿ ತನ್ನ ಪ್ರಾಣ ರಕ್ಷಣೆಗಾಗಿ ಅರುಣ್ ಮಲ್ಲಿಕ್ ಗೆ ಮರದ ತುಂಡಿನಿಂದ ತಲೆಗೆ ಹೊಡೆದಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!