Saturday, June 6, 2026
Homeಕರಾವಳಿಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ...

ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದ ಸಂಘಟನೆಯಿಂದ ಪ್ರತಿಭಟನೆ: ಪ್ರತಿಭಟನೆ ವೇಳೆ ಸೌಜನ್ಯ ಕುಟುಂಬದವರ ಮೇಲೆ ಹಲ್ಲೆಗೆ ಯತ್ನ ಆರೋಪ

- Advertisement -
- Advertisement -

ಸಂಘಟನೆಯಿಂದ  ಉಜಿರೆಯಲ್ಲಿ  ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆ ನಡೆಯಿತು. ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಪೇಟೆ ಮೂಲಕ ಸಾಗಿ ಬಂದ ಬೃಹತ್ ಮೆರವಣಿಗೆ ಎಸ್.ಡಿ.ಎಂ ಕಾಲೇಜು ಎದುರಿಗೆ ಸಾಗಿ ಬಂತು. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಗಿದರು..

ಇನ್ನು ಸಭೆ ಬಳಿಕ ನಡೆದ ಪಾದಯಾತ್ರೆ ವೇಳೆ ಸ್ಥಳಕ್ಕೆ ಆಗಮಿಸಿದ ಸೌಜನ್ಯ ಕುಟುಂಬಸ್ಥರ ಮೇಲೆ ಭಕ್ತವೃಂದದ ಕೆಲವರು ಆಕ್ರೋಶಿತರಾಗಿ‌ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೌಜನ್ಯ ತಾಯಿ ಕುಸುಮಾವತಿ ಮಗಳಿಗೆ ನ್ಯಾಯ ಕೊಡಿ ಎಂದು‌ ಸ್ಥಳಕ್ಕೆ‌ ತೆರಳಿದ್ದಾಗ ಅವರ ಮೇಲೆ ಪ್ರತಿಭಟನಾಕಾರರು ಆಕ್ರೋಶಿತರಾಗಿದ್ದಾರೆ ಅಲ್ಲಗೇ, ಸೌಜನ್ಯ ಸಹೋದರ ಜಯರಾಮ ಗೌಡರನ್ನೂ ಎಳೆದಾಡಿದ್ದು, ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

- Advertisement -

Latest News

error: Content is protected !!