Friday, June 5, 2026
Homeಕರಾವಳಿಸುಳ್ಯ: ಪೆರುವಾಜೆಯಲ್ಲಿ ಪ್ರವೀಣ್ ನೆಟ್ಟಾರು ನುಡಿ ನಮನ ಕಾರ್ಯಕ್ರಮ

ಸುಳ್ಯ: ಪೆರುವಾಜೆಯಲ್ಲಿ ಪ್ರವೀಣ್ ನೆಟ್ಟಾರು ನುಡಿ ನಮನ ಕಾರ್ಯಕ್ರಮ

- Advertisement -
- Advertisement -

ಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರಿಗೆ ನುಡಿ ನಮನ ಕಾರ್ಯಕ್ರಮ ಇಂದು ನಡೆಯಿತು.

ಬೆಳ್ಳಾರೆ ಗ್ರಾಮದ ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರವೀಣ್ ನೆಟ್ಟಾರು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಳೀನ್ ಕುಮಾರ್ ಕಟೀಲ್ ಸಾಂತ್ವನ ಹೇಳಿದರು.‌

ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಮೇಲೆ ತಲವಾರು ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.

- Advertisement -

Latest News

error: Content is protected !!