Sunday, June 23, 2024
Homeಚಿಕ್ಕಮಗಳೂರುಭಾರೀ ಮಳೆಗೆ ಮನೆ ಮೇಲೆ ಮುರಿದು ಬಿದ್ದ ಮರ:  ತಾಯಿ ಮಗಳು ಸಾವು

ಭಾರೀ ಮಳೆಗೆ ಮನೆ ಮೇಲೆ ಮುರಿದು ಬಿದ್ದ ಮರ:  ತಾಯಿ ಮಗಳು ಸಾವು

spot_img
- Advertisement -
- Advertisement -

ಚಿಕ್ಕಮಗಳೂರು:ಕಾಫಿನಾಡಿನಲ್ಲಿ ವರುಣ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ನಿನ್ನೆ ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ನಿನ್ನೆ ವರುಣ ಗಾಢ ನಿದ್ರೆಯಲ್ಲಿದ್ದ ತಾಯಿ ಮಗಳ ಪ್ರಾಣ ಕಸಿದಿದ್ದಾನೆ.ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನಲ್ಲಿ ಮನೆಯ ಮೇಲೆ ಮರ ಬಿದ್ದು ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೆ.ತಲಗೂರು ಗ್ರಾಮದಲ್ಲಿ ಎಂಬಲ್ಲಿ ಕಳೆದ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು ಮೃತರನ್ನು 55 ವರ್ಷದ ಚಂದ್ರಮ್ಮ ಹಾಗೂ ಮಗಳು 37 ವರ್ಷದ ಸರಿತಾ ಎಂದು ಗುರುತಿಸಲಾಗಿದೆ.

ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ತಹಶಿಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!